ಶಿವಮೊಗ್ಗ : ಡ್ರೋನ್ ಪ್ರತಾಪ್ ಈಗ ದೊಡ್ಡ ಡ್ರೋನ್ ಹಾರಿಸಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿದ್ದಾರೆ.
ಮಲೆನಾಡಿನ ಎಲೆಚುಕ್ಕಿ ರೋಗದ ಸಮಸ್ಯೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ ಪರಿಹಾರ ಕಂಡು ಕೊಳ್ಳಬಹುದು ಎಂದಿರುವ ಅವರು ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ಸೇರಿದಂತೆ ಎಲ್ಲೆಡೆ ತಾವು ತಯಾರು ಮಾಡಿರುವ ಡ್ರೋನ್ ತಂದು ಔಷಧಿ ಸಿಂಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಕಳೆದ ಒಂದು ತಿಂಗಳಿಂದ ಡ್ರೋನ್ ಹಾರಿಸೋದ್ರಲ್ಲಿ ಬಿಝಿ ಆಗಿರುವ ಪ್ರತಾಪ್ ನ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ತೀರ್ಥಹಳ್ಳಿಯ ಕೈಮರ ಬಳಿಯ ತೋಟವೊಂದರಲ್ಲಿ ಡ್ರೋನ್ ಹಾರಿಸಿದ್ದಾರೆ.
ಇದನ್ನೂ ಓದಿ : ಡ್ರೋನ್ ಪ್ರತಾಪ್ ವಿರುದ್ಧ ಶಿವಮೊಗ್ಗದ ವಕೀಲ ಪ್ರವೀಣ್ ರಿಂದ ದೂರು ದಾಖಲು!
ಸಂಶೋಧನೆ ಸುಳ್ಳು ಸತ್ಯವೋ
ಮಲೆನಾಡಿನಲ್ಲಿ ವ್ಯಾಪಕವಾಗಿರುವ ಅಡಿಕೆ ಮರದ ಕೊಳೆ ರೋಗಕ್ಕೆ ಔಷಧಿ ಹೊಡೆಯಲು ಡ್ರೋನ್ ಡಿಸೈನ್ ಮಾಡಿರುವ ಡ್ರೋನ್ ಪ್ರತಾಪ್ ಸುಮಾರು 17 ಲೀಟರ್ ಔಷಧಿ ಕೊಂಡೋಯ್ಯಬಲ್ಲ ಡ್ರೋನ್ ತಂದಿದ್ದಾರೆ. ಆದರೆ, ಡ್ರೋನ್ ಪ್ರತಾಪ್ ಅವರ ಈ ಸಂಶೋಧನೆ ಸುಳ್ಳು ಸತ್ಯವೋ ಎಂಬ ಬಗ್ಗೆ ಸಂಶೋಧಕರೇ ದೃಢೀಕರಣ ನೀಡಬೇಕಿದೆ.