ದಾವಣಗೆರೆ : ರಾಜ್ಯ ವಿಧಾನಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಲಿ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ದಾವಣಗೆರೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದ ವಿರುದ್ಧ ಮಾತನಾಡಿದರೆ ಶಿಸ್ತು ಕ್ರಮ ಎಂಬ ಕಟೀಲ್ ಹೇಳಿಕೆಗೆ ಟಾಂಗ್ ಕೊಟ್ಟರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಮೇಲೆ ಮಾತನಾಡಿದವರಿಗೆ ಶಿಸ್ತು ಕ್ರಮ ಕೈಗೊಂಡಿದ್ದೀರಾ? ಯಡಿಯೂರಪ್ಪ ಪರವಾಗಿ ಮಾತನಾಡಿದ್ರೆ ಪಕ್ಷ ವಿರೋಧಿನಾ? ಬಿಎಸ್ ವೈ ವಿರುದ್ದ ಮಾತನಾಡಿದರೆ ಪಕ್ಷದ ಪರನಾ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ : ಭತ್ತ ಬೆಳೆದಾದರೂ ಕೊಡಲಿ, ಅಕ್ಕಿ ಕೊಂಡಾದರೂ ಕೊಡಲಿ : ಡಿಕೆಶಿಗೆ ಸಿ.ಟಿ ರವಿ ಟಾಂಗ್
ಇದು ಘೋರ ದುರಂತ, ಅಪರಾಧ
ನಾನ ಘಂಟಾಘೋಷವಾಗಿ ಹೇಳುತ್ತೇನೆ. ಯಡಿಯೂರಪ್ಪ ಅವರನ್ನ ಕಡೆಗಣಿಸಿದ್ದೀರಿ, ಇದು ಘೋರ ದುರಂತ, ಅಪರಾಧ. ಪಕ್ಷ ಕಟ್ಟಿದವರೆಲ್ಲರನ್ನು ಕಡೆಗಣಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿ, ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಬಿಡಲಿಲ್ಲ ಎಂದು ಸ್ವಪಕ್ಷದವರ ವಿರುದ್ಧವೇ ಗುಡುಗಿದರು.
ಪಕ್ಷದ ವಿರುದ್ಧ ನಾನು ಮಾತನಾಡಿಲ್ಲ
ರಾಜ್ಯದ ಅಧ್ಯಕ್ಷರು ಗೊಂದಲದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಒಮ್ಮೆ ರಾಜಿನಾಮೆ ನೀಡುತ್ತೇನೆ, ಒಮ್ಮೆ ನೀಡುವುದಿಲ್ಲ ಅಂತ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಸೋಲಿನ ನೈತಿಕ ಹೊಣೆ ಹೊತ್ತು ಕಟೀಲ್ ರಾಜೀನಾಮೆ ನೀಡಿ, ಸಮರ್ಥ ನಾಯಕನನ್ನು ಆಯ್ಕೆ ಮಾಡಿ. ಪಕ್ಷ ತಾಯಿಗೆ ಸಮಾನ, ಪಕ್ಷದ ವಿರುದ್ಧ ನಾನು ಮಾತನಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.