ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದರು.
ಈ ಸಂದರ್ಭದಲ್ಲಿ ವಸತಿ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಇದ್ದರು.
Shri Siddaramaiah, Chief Minister of Karnataka along with Shri Suresha B.S., Minister of Urban Development and Shri B.Z. Zameer Ahmed Khan, Minister of Housing, Wakf and Minority Welfare called on President Droupadi Murmu at Rashtrapati Bhavan. pic.twitter.com/u0vhwml5cJ
— President of India (@rashtrapatibhvn) June 21, 2023
ರಾಷ್ಟ್ರಪತಿಯವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೇನೆ. ಸಿಎಂ ಆದ ಬಳಿಕ ಮೊದಲ ಸಲದ ಭೇಟಿ ಇದಾಗಿದೆ. ರಾತ್ರಿ 9 ಗಂಟೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗ್ತಿದ್ದೇನೆ. ಈ ಬಾರಿಯ ಭೇಟಿ ಕೇವಲ ಸೌಜನ್ಯಯುವಾದ ಭೇಟಿಯಾಗಿದೆ. ಅಕ್ಕಿ ವಿಚಾರವನ್ನು ಕೂಡ ಪ್ರಸ್ತಾಪ ಮಾಡುತ್ತೇನೆ. ಪಿಯೂಶ್ ಗೊಯೆಲ್ ಅವರ ಭೇಟಿಗೆ ಸಮಯ ಕೇಳಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಅವರ ಪ್ರಶ್ನೆಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ. ಅವರ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ. ಕುಮಾರಸ್ವಾಮಿ ಲೇವಡಿ ವಿಚಾರವಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೇನೆ. ನಮ್ಮದು ಕೊಯಿಲೇಷನ್ ಗವರ್ನಮೆಂಟ್ ಅಲ್ಲ. ಶಾಸಕರುಗಳು ನನ್ನನ್ನ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.