Monday, November 25, 2024

ಆಡಳಿತ ಯಂತ್ರಕ್ಕೆ ಸರ್ಜರಿ : ಐದು ಮಂದಿಗೆ ಜಿಲ್ಲಾಧಿಕಾರಿ ಭಾಗ್ಯ

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. 10 ಐಎಎಸ್ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಐಎಎಸ್ ಹಾಗೂ ಐಪಿಎಸ್ ಅಧಿಕಾರಗಳ ವರ್ಗಾವಣೆ ಪರ್ವ ಕಂಟಿನ್ಯೂ ಆಗಿದೆ. ಐದು ಜನ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳನ್ನಾಗಿ ವರ್ಗಾವಣೆ ಮಾಡಿದೆ.

ಐವರಿಗೆ ಜಿಲ್ಲಾಧಿಕಾರಿ ಭಾಗ್ಯ

ತುಮಕೂರು ಜಿಲ್ಲಾಧಿಕಾರಿಯಾಗಿ ಕೆ. ಶ್ರೀನಿವಾಸ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಪಿ.ಎನ್ ರವೀಂದ್ರ, ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಕೆ.ಎಂ.ಜಾನಕಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ಹಾಗೂ ಮಂಡ್ಯ ಜಿಲ್ಲಾಧಿಕಾರಿಯಾಗಿ ಡಾ. ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ : ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ವರ್ಗಾವಣೆಗೊಂಡ ಅಧಿಕಾರಿಗಳು

  • ರವೀಂದ್ರ ಪಿ.ಎನ್ : ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
  • ಶ್ರೀನಿವಾಸ್ ಕೆ : ಜಿಲ್ಲಾಧಿಕಾರಿ, ತುಮಕೂರು
  • ಜಾನಕಿ ಕೆ.ಎಂ : ಜಿಲ್ಲಾಧಿಕಾರಿ, ಬಾಗಲಕೋಟೆ
  • ಮುಲ್ಲೈ ಮುಹಿಲನ್ : ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
  • ಡಾ. ಕುಮಾರ್ : ಜಿಲ್ಲಾಧಿಕಾರಿ, ಮಂಡ್ಯ
  • ಯೋಗೇಶ್ ಎ.ಎಂ : ಆಯುಕ್ತ, ಸಾರಿಗೆ ಮತ್ತು ರಸ್ತೆ ಸುರಕ್ಷತೆ
  • ಪಲ್ಲವಿ ಆಕುರಾತಿ : ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
  • ಡಾ.ಎಂ.ವಿ ವೆಂಕಟೇಶ್ : ಆಯುಕ್ತ, ಪಶುಸಂಗೋಪನಾ ಇಲಾಖೆ
  • ಪ್ರಭು ಜಿ : ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
  • ನವೀನ್ ಕುಮಾರ್ ರಾಜು : ಇಡಿ, ವಸತಿ ಶಿಕ್ಷಣ ಸೊಸೈಟಿ

RELATED ARTICLES

Related Articles

TRENDING ARTICLES