ವಿಜಯಪುರ : ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದ್ದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನಿಲುವನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಅನುಸರಿಸಿದೆ ಎಂದು ವಾಗ್ದಾಳಿ ನ ಡೆಸಿದ್ದಾರೆ.
ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು ಹಿಂದೂ ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ? ಯಾವ ಮಾಫಿಯಾ ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರ "Conversion Bhagya”
ಆಮಿಷದ ಮತಾಂತರಕ್ಕೆ ಬೆಂಬಲ ನೀಡಲು ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ!
ಇನ್ನು ಮುಂದೆ
ಮಹದೇವಪ್ಪನೂ "CONVERT"
ಕಾಕಪಾಟಿಲನೂ "CONVERT”— Basanagouda R Patil (Yatnal) (@BasanagoudaBJP) June 15, 2023
ಇದನ್ನೂ ಓದಿ : ‘ಸುಳ್ಳುರಾಮಯ್ಯ’ ಅಲ್ಲ ಅನ್ನೋದಾದ್ರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ : ಸಿ.ಟಿ ರವಿ
ಮಹದೇವಪ್ಪನೂ CONVERT
ಸಿದ್ದರಾಮಯ್ಯನವರ Conversion Bhagya. ಆಮಿಷದ ಮತಾಂತರಕ್ಕೆ ಬೆಂಬಲ ನೀಡಲು ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ. ಇನ್ನು ಮುಂದೆ ಮಹದೇವಪ್ಪನೂ ಕನ್ವರ್ಟ್(CONVERT), ಕಾಕಪಾಟಿಲನೂ ಕನ್ವರ್ಟ್(CONVERT) ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ @siddaramaiah ನವರ ಹಿಂದೂ ವಿರೋಧಿ ನಿಲುವನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಅನುಸರಿಸಿದೆ.
ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು "ಹಿಂದೂ" ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ?
ಯಾವ "ಮಾಫಿಯಾ" ಈ ಮತಾಂತರ ನಿಷೇಧ…
— Basanagouda R Patil (Yatnal) (@BasanagoudaBJP) June 15, 2023
ಮತಾಂತರ ನಿಷೇಧ ಕಾಯ್ದೆ ವಾಪಸ್
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ಕ್ಯಾಬಿನೆಟ್ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಜುಲೈ ಅಧಿವೇಶನದಲ್ಲಿ ಹೊಸ ತಿದ್ದುಪಡಿಯೊಂದಿಗೆ ಮರುಮಂಡನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.