ಬೆಂಗಳೂರು : ಹೊಸ ಮನೆಗಳಿಗೂ, ಶಿಫ್ಟಿಂಗ್ ಆಗುವವರಿಗೂ 200 ಯುನಿಟ್ ಉಚಿತ ವಿದ್ಯುತ್ ಸಿಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ಇದ್ದಾರೆ ಅನ್ನೋದಕ್ಕೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇದ್ರೆ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಮನೆಗಳಿಗೂ, ಶಿಫ್ಟಿಂಗ್ ಆಗುವವರಿಗೂ ಉಚಿತ ವಿದ್ಯುತ್ ಸಿಗಲಿದೆ. ಆರ್.ಆರ್ ನಂಬರ್ ಗೆ ಓಟರ್ ಐಡಿ ಲಿಂಕ್ ಆಗಿದ್ರೆ ಸಾಕು. ಅಥವಾ ಅಗ್ರಿಮೆಂಟ್ ಪತ್ರ ಇದ್ರೂ ಅವರೆಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್. ಆದರೆ, ಈ ತಿಂಗಳ ಬಿಲ್ ಮಾತ್ರ ಗ್ರಾಹಕರು ಕಟ್ಟಬೇಕು ಎಂದು ಹೇಳಿದ್ದಾರೆ.
ಇದನ್ನೂ ಒದಿ : ನಾವು ಬಿಲ್ ಕಟ್ಟಲ್ಲ! : 300 ರೂ. ಇದ್ದ ಕರೆಂಟ್ ಬಿಲ್ 2000 ರೂ. ಆಗಿದ್ದು ಹೇಗೆ?
ಕಲಬುರ್ಗಿಯಲ್ಲಿ ಗೃಹಜ್ಯೋತಿಗೆ ಚಾಲನೆ
ಜುಲೈ ತಿಂಗಳಿಂದ ಫ್ರೀ ವಿದ್ಯುತ್ ಸಿಗಲಿದೆ. ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ. ಬಹುಶಃ ಕಲಬುರ್ಗಿಯಲ್ಲಿ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ಆಧಾರ್ ಲಿಂಕ್ ಆಗಬೇಕು ಅನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಜನರಿಗೆ ಸರಳವಾಗಿ ಯೋಜನೆ ತಲುಪಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಸೋಮವಾರ ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಭೆ ಇದೆ. ಬಳಿಕ ಎಲ್ಲಾ ಗೊಂದಲಗಳಿಗೂ ಉತ್ತರ ಸಿಗಲಿದೆ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಎಲ್ಲ ಗೊಂದಲ ನಿವಾರಣೆ
ಉಚಿತ ಗ್ಯಾರಂಟಿಗಳ ಬಗೆಗಿನ ಎಲ್ಲ ಗೊಂದಲಗಳು ನಿವಾರಣೆ ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಲ್ಲದರ ಬಗ್ಗೆ ಚರ್ಚೆ ಮಾಡಿ ಪರಿಹಾರ ಮಾಡಿದ್ದೀವಿ. ಪ್ರಧಾನಿ ಮೋದಿಯವರು ಎಷ್ಟು ಭರವಸೆ ಕೊಟ್ಟಿದ್ರು, ಎಲ್ಲ ಈಡೇರಿಸಿದ್ರಾ? ನಾಳೆ ಶಕ್ತಿ ಯೋಜನೆಗೆ ಚಾಲನೆ ಕೊಡ್ತೀವಿ, ಎಲ್ರೂ ಬನ್ನಿ ಅಂತ ಹೇಳಿದ್ದಾರೆ.