ಬೆಂಗಳೂರು : ಸಂವಿಧಾನವೇ ನಮ್ಮ ಭಗವದ್ಗೀತೆ, ಕುರಾನ್ ಬೈಬಲ್ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಭೀಮ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶ್ರೀರಾಮನ ತಂದೆ ದಶರಥ ಮಹರಾಜ ಅವರ ವಿಗ್ರಹ ಇಲ್ಲಾ. ರಾಮನ ಬಂಟ ಆಂಜನೇಯನ ವಿಗ್ರಹ ಎಲ್ಲಾ ಕಡೆ ಇದೆ. ಇದು ಸಮಾಜದ ಪರ ಹೋರಾಟ ಮಾಡಿದ್ದು ತೋರಿಸುತ್ತೆ ಎಂದು ತಿಳಿಸಿದ್ದಾರೆ.
ಭೀಮಸಂಕಲ್ಪ ಪವಿತ್ರವಾದ ಐತಿಹಾಸಿಕ ಸಮಾರಂಭ. ನಾನು ವಿದ್ಯಾರ್ಥಿ ನಾಯಕನಿಂದಾಗ ನೋಡ್ತಿದ್ದೀನಿ. ನಿಮ್ಮ ಹೋರಾಟ ರಸ್ತೆಯಲ್ಲಿ, ಜನರ ಮಧ್ಯೆ ಇರುತ್ತೆ. ನಾವೆಲ್ಲಾ ಖುರ್ಚಿಗಾಗಿ ಕಿತ್ತಾಡುತ್ತಾ ಇರ್ತಿವಿ. ನಮಗೂ ನಿಮಗೂ ಇರುವಂತಹ ವ್ಯತ್ಯಾಸ ಇಷ್ಟೇ. ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ದೀಕ್ಷೆ ಉಳಿಸಿಕೊಳ್ಳುವುದಕ್ಕೆ ನಾವು ಹೋರಾಟ ಮಾಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಧ್ಯಾತ್ಮ ಬಿಟ್ಟು ಹೋದ್ರೆ ಸರ್ಕಾರಕ್ಕೆ ದೈವವೇ ಉತ್ತರ ನೀಡಲಿದೆ : ಕೋಡಿ ಮಠ ಶ್ರೀ
ಧರ್ಮ ಯಾವುದಾದರೂ ತತ್ವ ಒಂದೇ
ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡುವಾಗ 11 ಸಾವಿರ ಪಂಚಾಯಿತಿಗಳಿಗೆ ಆನ್ ಲೈನ್ ಆಫ್ ಲೈನ್ ನಲ್ಲಿ ಸಂವಿಧಾನ ಪೀಠಿಕೆ ಓದಿಸಿದ್ದೆ. ಸಂವಿಧಾನವೇ ನಮ್ಮ ಭಗವದ್ಗೀತೆ, ಕುರಾನ್, ಬೈಬಲ್. ನಾವು ನೂರಾರು ದೇವರುಗಳನ್ನು ಪೂಜೆ ಮಾಡ್ತೀವಿ. ಧರ್ಮ ಯಾವುದಾದರೂ ತತ್ವ ಒಂದೇ. ಕರ್ಮ ಯಾವುದಾದರು ನಿಷ್ಠೆ ಒಂದೇ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಮಹತ್ತರ ಕೊಡುಗೆ ನೀಡಿದ ಹಾಗೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ಕೈ ಜೋಡಿಸಿರುವ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.