ಬೆಂಗಳೂರು : ರಾಜ್ಯದ ನೂತನ ಡಿಜಿ ಹಾಗೂ ಐಜಿಪಿಯಾಗಿ ಅಲೋಕ್ ಮೋಹನ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು.
ಬಿಹಾರ ಮೂಲದ, ಕರ್ನಾಟಕ ಕೇಡರ್(1984)ನ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅವರನ್ನು ಇತ್ತೀಚೆಗೆ ಡಿಜಿ ಹಾಗೂ ಐಜಿಪಿಯಾಗಿ ನೇಮಕ ಮಾಡಲಾಗಿತ್ತು. ಬೆಂಗಳೂರಿನ ನೃಪತುಂಗಾ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಿರ್ಗಮಿತ ಅಧಿಕಾರಿ ಪ್ರವೀಣ್ ಸೂದ್ ಅಧಿಕಾರ ಹಸ್ತಾಂತರಿಸಿದ್ದಾರೆ.
ಅಲೋಕ್ ಮೋಹನ್ ಅವರು ಕರ್ನಾಟಕದಲ್ಲಿ ಎಸಿಬಿ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದು, 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2025ರ ಏಪ್ರಿಲ್ ನಲ್ಲಿ ನಿವೃತ್ತರಾಗಲಿದ್ದಾರೆ.
ರಾಜ್ಯದ ನೂತನ ಡಿಜಿ, ಐಜಿಪಿಯಾಗಿ ನೇಮಕಗೊಂಡಿರುವ ಶ್ರೀ ಅಲೋಕ್ ಮೋಹನ್ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ ಶುಭ ಹಾರೈಸಿದರು. pic.twitter.com/zowu0RvTnB
— DK Shivakumar (@DKShivakumar) May 21, 2023
ಇದನ್ನೂ ಓದಿ : ನನಗೆ ‘ಝೀರೋ ಟ್ರಾಫಿಕ್ ಸೌಲಭ್ಯ’ ಬೇಡ : ಸಿಎಂ ಸಿದ್ದರಾಮಯ್ಯ
ಅಧಿಕಾರ ಸ್ವೀಕಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ನಮ್ಮ ಮೊದಲ ಆದ್ಯತೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಕ್ರೈಮ್ಗೆ ಕಡಿವಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಪೊಲೀಸ್ ಠಾಣೆಗೆ ಬರುವ ಎಲ್ಲ ದೂರುಗಳನ್ನು ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಪೊಲೀಸರಿಗೆ ಮತ್ತಷ್ಟು ಹೆಚ್ಚಿನ ಟೆಕ್ನಿಕಲ್ ಟ್ರೈನಿಂಗ್ ನೀಡಲಾಗುವುದು. ಟ್ರಾಫಿಕ್ ಮ್ಯಾನೇಜ್ಮೆಂಟ್ ಕೂಡ ಮುಖ್ಯವಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಗಮನ ನೀಡಲಿದ್ದೇವೆ ಎಂದು ಅಲೋಕ್ ಮೋಹನ್ ಹೇಳಿದರು.
ತಪ್ಪು ಮಾಡಿದವರ ಮೇಲೆ ಕ್ರಮ
ಪಿಎಸ್ ಐ ಕೇಸ್ ಹಗರಣ ಕೋರ್ಟ್ ನಲ್ಲಿ ಇದೆ. ಈಗಷ್ಟೇ ಚಾರ್ಜ್ ತೆಗೆದು ಕೊಂಡಿದ್ದೇನೆ. ಮುಂದೆ ಅದರ ಬಗ್ಗೆ ಚರ್ಚೆ ಮಾಡ್ತೀವಿ. ಇಲಾಖೆಯಲ್ಲಿ ಅವಾರ್ಡ್ ಎಷ್ಟು ಕೊಟ್ಟಿದ್ದೇನೋ, ಅಷ್ಟೇ ತಪ್ಪು ಕೆಲಸ ಮಾಡಿದವರ ಮೇಲೆ ಕ್ರಮ ತೆಗೆದುಕೊಂಡಿದ್ದೇನೆ. ಒಳ್ಳೆಯ ಅಧಿಕಾರಿಗಳಿಗೆ ರಿವಾರ್ಡ್ ಕೊಟ್ಟಿದ್ದೇನೆ. ತಪ್ಪು ಮಾಡಿದ ಅಧಿಕಾರ ಮೇಲೆ ಕ್ರಮ ಕೂಡ ಜರುಗಿಸಿದ್ದೇನೆ ಎಂದು ತಿಳಿಸಿದರು.