ನವದೆಹಲಿ : ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. ಆದರೆ, ಮಲ್ಲಿಕಾರ್ಜುನ್ ಖರ್ಗೆ ಸೂತ್ರದಂತೆ ಸಿದ್ದರಾಮಯ್ಯ 2 ವರ್ಷ ಹಾಗೂ ಡಿಕೆಶಿ 3 ವರ್ಷ ಸಿಎಂ ಆಗಲಿರುವ ಸಾಧ್ಯತೆ ಇದೆ.
ಹೌದು, ಸಿಎಂ ಕುರ್ಚಿ ಗುದ್ದಾಟಕ್ಕೆ ಟ್ವೀಸ್ಟ್ ಮೇಲೆ ಟ್ವಿಸ್ಟ್ ಸಿಗತ್ತಲೇ ಇದೆ.ಇನ್ನೂ ಸಿಎಂ ಆಯ್ಕೆ ಕುರಿತಂತೆ ಕೊನೆಗೂ ಡಿಕೆಶಿ ಅವರು ಮೌನ ಮುರಿದಿದ್ದಾರೆ.ಇನ್ನೂ ಸಿದ್ದರಾಮಯ್ಯನವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಫೈನಲ್ ಮಾಡಿರುವ ಬಳಿಕ ಡಿಕೆಶಿ ಅವರು ದಿಲ್ಲಿಯಲ್ಲಿ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಗಾಂಧಿ ಕುಟುಂಬಕ್ಕೆ ಗೌರವ ಕೊಡುತ್ತೇನೆ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಅಧಿಕಾರ ಹಂಚಿಕೆ ಸೂತ್ರ ಪಾಲಿಸಲಾಗುತ್ತದೆ. ಜನಸೇವೆ ಮಾಡಲು ನಾವು ಕಟಿಬದ್ಧರಾಗಿದ್ದೇವೆ’ ಎಂದು ಡಿಕೆಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.