ಬೆಂಗಳೂರು : ಚಿತ್ರದುರ್ಗದಲ್ಲಿ ಕಳೆದ ಬಾರಿಯ ಫಲಿತಾಂಶ ಉಲ್ಟಾ ಆಗಿದೆ. ಈ ಬಾರಿ ಕಾಂಗ್ರೆಸ್ ಐತಿಹಾಸಿಕ ದಿಗ್ವಿಜಯ ಸಾಧಿಸಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿ ಕೆ.ಸಿ ವೀರೇಂದ್ರ ಪಪ್ಪಿ ಐತಿಹಾಸಿಕ ಗೆಲುವನ್ನು ಸಾಧಿಸಿದ್ದು, ಬಿಜೆಪಿಯ ಭದ್ರಕೋಟೆಗೆ ನುಗ್ಗಿ ಕಾಂಗ್ರೆಸ್ ಧ್ವಜ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ 135 ಸೀಟುಗಳನ್ನು ಗೆದ್ದಿರುವ ಕಾಂಗ್ರೆಸ್, ಇತ್ತ ಕೋಟೆ ನಾಡು ಚಿತ್ರದುರ್ಗದಲ್ಲಿ 6 ವಿಧಾನಸಭಾ ಸ್ಥಾನಗಳ ಪೈಕಿ ಐದು ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೂ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ ವೀರೇಂದ್ರ ಪಪ್ಪಿ ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿಯನ್ನು ಮಣಿಸಿ ಈ ಬಾರಿ ದಿಗ್ವಿಜಯ ಸಾಧಿಸಿದ್ದಾರೆ.
ಇದನ್ನೂ ಓದಿ : ತುಮಕೂರು ‘ಕಬ್ಜ’ ಮಾಡಿದ ಕಾಂಗ್ರೆಸ್ : ಬಿಜೆಪಿ, ಜೆಡಿಎಸ್ ಛಿದ್ರ.. ಛಿದ್ರ..
ವೀರೇಂದ್ರ ಪಪ್ಪಿ ಒಟ್ಟು 1,22,021 ಮತಗಳನ್ನು ಪಡೆಯುವ ಮೂಲಕ ಶಾಸಕ ತಿಪ್ಪಾರೆಡ್ಡಿಗಿಂತ 53,412 ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಿದ್ದಾರೆ.
ಬಹು ದೊಡ್ಡ ಜವಾಬ್ದಾರಿ
ಗೆಲುವಿನ ಬಳಿಕ ಮಾತನಾಡಿರುವ ವೀರೇಂದ್ರ, ಕ್ಷೇತ್ರದ ಎಲ್ಲರೂ ಮನೆ ಮಗ ಅಂತ ತಿಳಿದುಕೊಂಡು ಆಶೀರ್ವಾದ ಮಾಡಿದ್ದಾರೆ. ಇವನು ಏನೋ ಒಂದು ಅಭಿವೃದ್ಧಿ ಮಾಡುತ್ತಾನೆ ಎಂಬ ನಂಬಿಕೆ ಮೇಲೆ ಆಶೀರ್ವಾದ ಮಾಡಿದ್ದಾರೆ. ನನ್ನ ಮೇಲೆ ಬಹು ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ಎಲ್ಲರಿಗೂ ಕೂಡ ಮನಸ್ಸಿನಾಳದಿಂದ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಗೆದ್ದವರು
ಚಿತ್ರದುರ್ಗ : ಕೆ.ಸಿ ವೀರೇಂದ್ರ(ಕಾಂಗ್ರೆಸ್)
ಹಿರಿಯೂರು : ಡಿ.ಸುಧಾಕರ್(ಕಾಂಗ್ರೆಸ್)
ಮೊಳಕಾಲ್ಮೂರು : ಎನ್.ವೈ ಗೋಪಾಲಕೃಷ್ಣ(ಕಾಂಗ್ರೆಸ್)
ಚಳ್ಳಕೆರೆ : ಟಿ.ರಘುಮೂರ್ತಿ(ಕಾಂಗ್ರೆಸ್)
ಹೊಸದುರ್ಗ : ಬಿ.ಜಿ ಗೋವಿಂದಪ್ಪ(ಕಾಂಗ್ರೆಸ್)
ಹೊಳಲ್ಕೆರೆ : ಎಂ.ಚಂದ್ರಪ್ಪ(ಬಿಜೆಪಿ)