ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿವೆ. ಹಳೇ ಮೈಸೂರು ಭಾಗದ ಕ್ಷೇತ್ರಗಳು ಈ ಬಾರಿ ಕುತೂಹಲ ಕೆರಳಿಸಿವೆ.
ಆಡಳಿತರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಳೇ ಮೈಸೂರು ಕಬ್ಜ ಮಾಡಲು ರಣತಂತ್ರ ರೂಪಿಸಿದ್ದರು. ಬಿಜೆಪಿ ನಾಯಕರು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿ ಭರ್ಜರಿ ಪ್ರಚಾರ ನಡೆಸಿದ್ದರು. ಇತ್ತ, ಕೇಸರಿ ಕಲಿಗಳು ಪ್ರಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಇತ್ತ, ಜೆಡಿಎಸ್ ತಮ್ಮ ಭದ್ರಕೋಟೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿತ್ತು.
ನಾಳೆ ಫಲಿತಾಂಶ ಹೊರಬೀಳಲಿದ್ದು ಯಾರ ರಣತಂತ್ರ ವರ್ಕೌಟ್ ಆಗಲಿದೆ. ಈ ಭಾಗ ಯಾರ ಪಾಲಾಗುತ್ತೆ ಅಂತಾ ಕಾದುನೋಡಬೇಕಿದೆ.
ಇದನ್ನೂ ಓದಿ : ರಾಜ್ಯದಲ್ಲಿ ‘ಕುಮಾರಣ್ಣನೇ ಕಿಂಗ್ ಮೇಕರ್’ : ಸಿಎಂ ಇಬ್ರಾಹಿಂ ಟಕ್ಕರ್
ಯಾವ ಜಿಲ್ಲೆ? ಎಷ್ಟು ಕ್ಷೇತ್ರ?
- ಮೈಸೂರು: 11
- ಮಂಡ್ಯ: 07
- ರಾಮನಗರ: 04
- ಬೆಂಗಳೂರು ಗ್ರಾಮಾಂತರ: 05
- ಕೋಲಾರ: 07
- ಚಿಕ್ಕಬಳ್ಳಾಪುರ: 05
- ತುಮಕೂರು: 11
- ಹಾಸನ: 07
- ಚಾಮರಾಜನಗರ: 04
- ಒಟ್ಟು 61
ಹೀಗಿದೆ ಸ್ಟಾರ್ ವಾರ್ ಕಿಕ್
- ವರುಣಾ-ಸಿದ್ದರಾಮಯ್ಯ VS ವಿ. ಸೋಮಣ್ಣ
- ಕನಕಪುರ: ಡಿ.ಕೆ ಶಿವಕುಮಾರ್ VS ಆರ್. ಅಶೋಕ್
- ಚನ್ನಪಟ್ಟಣ: ಎಚ್.ಡಿ ಕುಮಾರಸ್ವಾಮಿ VS ಸಿ.ಪಿ ಯೋಗೇಶ್ವರ
- ಕೊರಟಗೆರೆ: ಡಾ.ಜಿ ಪರಮೇಶ್ವರ VS ಅನಿಲ್ ಕುಮಾರ್
- ಹಾಸನ: ಪ್ರೀತಂ ಗೌಡ VS ಸ್ವರೂಪ್ ಗೌಡ
- ತುಮಕೂರು ಗ್ರಾಮಾಂತರ : ಬಿ. ಸುರೇಶ್ ಗೌಡ VS ಡಿ.ಸಿ ಗೌರಿಶಂಕರ್
- ಶಿರಾ: ರಾಜೇಶ್ ಗೌಡ VS ಟಿ.ಬಿ ಜಯಚಂದ್ರ
- ರಾಮನಗರ: ನಿಖಿಲ್ ಕುಮಾರಸ್ವಾಮಿ VS ಇಕ್ವಾಲ್ ಅಹ್ಮದ್
- ಚಿಕ್ಕಬಳ್ಳಾಪುರ: ಡಾ.ಕೆ. ಸುಧಾಕರ್ VS ಪ್ರದೀಪ್ ಈಶ್ವರ್