ರಾಜ್ಯ ಚುನಾವಣೆ ಇನ್ನೂ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದ್ದು, ಮತದಾನ ಹಬ್ಬವನ್ನು ಸಂಭ್ರಮಿಸಲು ಎಲ್ಲಾ ಮತದಾರರು ಸಜ್ಜಾಗಿದ್ದಾರೆ. ಹಾಗಿದ್ದರೆ ನಾವು ಮತದಾನ ಮಾಡಲು ಹೋಗುವ ಯಾವೆಲ್ಲಾ ದಾಖಲೆಗಳು ನಮ್ಮ ಬಳಿ ಇರಬೇಕು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ…
ಈ ದಾಖಲೆ ನಮ್ಮ ಬಳಿ ಇರಲೇಬೇಕು?
- ನಾವು ಮತಗಟ್ಟೆಗೆ ತೆರಳುವ ಪ್ರತಿ ಮತದಾರ ಚುನಾವಣೆ ಆಯೋಗ ನೀಡಿರುವ ತಮ್ಮ ಮುಖ ಚಹರೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
- ಒಂದು ವೇಲೆ ಮತದಾರ ಬಳಿ ಎಲೆಕ್ಷನ್ ಐಡಿ ಇಲ್ಲದಿದ್ರೆ ಆಧಾರ್ ಕಾರ್ಡ್ ಸಹ ಕೊಂಡಯ್ಯಬಹುದು ಅಥವಾ ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ವಾಹನ ಚಾಲನ ಪರವಾನಿಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬಹುದು.
- NPR ಅಡಿಯಲ್ಲಿ RGI ವಿತರಿಸಿರುವ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆಗಳು, ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಗಳ ಫೋಟೋ ಗುರುತಿನ ಚೀಟಿ.
- ಶಾಸಕ/ಸಂಸದ/ವಿಧಾನ ಪರಿಷತ್ ಸದಸ್ಯರು ನೀಡಿರುವ ಗುರುತಿನ ಚೀಟಿ, ಯುನಿಕ್ ಡಿಸ್ಎಬಿಲಿಟಿ ಕಾರ್ಡ್ ಈ ಎಲ್ಲಾ ದಾಲೆಗಳನ್ನು ಮತದಾರ ಮತಗಟ್ಟೆಗೆ ತಪ್ಪದೇ ತಗೆದುಕೊಂಡು ಹೋಗಿ ಮಾತದಾನ ಮಾಡಬೇಕು.