Tuesday, December 24, 2024

ಸಿದ್ದರಾಮಯ್ಯಗೆ ಸಂಕಷ್ಟ : ಲೋಕಾಯುಕ್ತಕ್ಕೆ ‘ಸಿದ್ದು ಪ್ರಕರಣ’ ರವಾನೆ

ಬೆಂಗಳೂರು : ಸಿದ್ದರಾಮಯ್ಯ ಮೇಲಿನ ಪ್ರಕರಣವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್. ಒಂದು ಕೇಸ್ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್ ಭ್ರಷ್ಟಾಚಾರದ 60 ಪ್ರಕರಣಗಳೂ ಎಸಿಬಿಯಲ್ಲಿ ಮುಚ್ಚಿಹಾಕಿದ್ದರು. ಆ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಮೇಲೂ ಸೇರಿ ಪ್ರಕರಣಗಳಿದ್ದವು. ಅವುಗಳ ತನಿಖೆ ಮಾಡದೇ ಬಿ ರಿಪೋರ್ಟ್ ಕೊಟ್ಟು ಮುಚ್ಚಿಹಾಕಿದ್ದಾರೆ ಎಂದು ಹೇಳಿದ್ದಾರೆ.

ಎಸಿಬಿ ಮಾಡಿದ್ದೇ ಕೇಸ್ ಮುಚ್ಚಿಹಾಕುಲು ಅಂತಾ ಹೈ ಕೋರ್ಟ್ ಹೇಳಿದೆ. ಆರೋಪವನ್ನು ಮುಚ್ಚಿ ಹಾಕಲು‌ ಎಸಿಬಿ ರಚನೆಯಾಗಿದೆ ಅಂತಾ ಉಲ್ಲೇಖಿಸಿದ್ದಾರೆ. ಹೀಗಾಗಿ ಲೋಕಾಯುಕ್ತಕ್ಕೆ ಪ್ರಕರಣಗಳನ್ನು ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ : ಕುಮಾರಸ್ವಾಮಿ ‘ವೀರನೂ ಅಲ್ಲ, ಶೂರುನೂ ಅಲ್ಲ..!’ : ಡಿ.ಕೆ ಶಿವಕುಮಾರ್

ಕುಖ್ಯಾತಿ ಸಿದ್ದರಾಮಯ್ಯರಿಗೆ ಸಲ್ಲುತ್ತೆ

ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕುಖ್ಯಾತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಭ್ರಷ್ಟಾಚಾರ ಪರವಾಗಿ ನಿಂತಿರೋದು ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಎಂದು‌ ಸಿಎಂ ಬೊಮ್ಮಾಯಿ‌ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ

ರಾಜ್ಯದ ಮುಖ್ಯಮಂತ್ರಿಯಾಗಿ 224 ಕ್ಷೇತ್ರ ಕಾಳಜಿ ಮಾಡುತ್ತೇನೆ. ಗದಗನೂ ಕಾಳಜಿ ಮಾಡುತ್ತಿದ್ದೇನೆ. ದಾರಿ ಮಧ್ಯೆ ಭೇಟಿಯಾಗಿ ಸಲಹೆ ಸೂಚನೆ ಕೊಡಲು ಬಂದಿದ್ದೇನೆ. ಕಾಂಗ್ರೆಸ್ ಐದು ಬಿಟ್ಟು ಐವತ್ತು ಗ್ಯಾರಂಟಿ ಘೋಷಣೆ ಮಾಡಲಿ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 10ನೇ ತಾರೀಖಿನ ವರೆಗೂ ಮತ್ರ ಗ್ಯಾರಂಟಿ ಎಂದು ಕುಟುಕಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ 91 ಬೈಗುಳ ಬಳಕೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ‌ ಅವರು, ಮೋದಿಯವರು ಏನು ಹೇಳಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಬೇಕಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES