ಬೆಂಗಳೂರು : ಪ್ರಚಾರ ನಡೆಸುತ್ತಿದ್ದ ವೇಳೆ ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿರುವ ಘಟನೆ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿಸಿದ್ದಾರೆ
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ.
ಈಗ ಆರಾಮಾಗಿದ್ದೇನೆ.
ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ.— Siddaramaiah (@siddaramaiah) April 29, 2023
ಇದನ್ನೂ ಓದಿ : ಪ್ರಚಾರದ ವೇಳೆ ಪರಮೇಶ್ವರ್ ತಲೆಗೆ ಕಲ್ಲೇಟು, ಆರೋಪಿ ರಂಗಧಾಮಯ್ಯ ಬಂಧನ
ಸಿದ್ದರಾಮಯ್ಯಗೆ ಆಗಿದ್ದೇನು?
ಇನ್ನೂ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿರುವ ಘಟನೆ ನಡೆದಿತ್ತು. ಕಾರಿನ ಡೋರ್ ನಲ್ಲಿ ನಿಂತುಕೊಂಡು ಜನಗಳತ್ತ ಕೈಬೀಸುತ್ತಿದ್ದ ಸಮಯದಲ್ಲಿ ಬಿಸಿಲಿನ ಝಳಕ್ಕೆ ಕುಸಿದು ಬಿದ್ದರು. ಕೂಡಲೇ ಗನ್ ಮ್ಯಾನ್ (ಅಂಗರಕ್ಷಕ) ಹಾಗೂ ಅಲ್ಲಿದ್ದವರು ಸಿದ್ದರಾಮಯ್ಯ ಅವರನ್ನು ಮೇಲೆತ್ತಿದರು.
ಕಾರಿನ ಸೀಟ್ ನಲ್ಲಿ ಕೂರಿಸಿ, ನೀರು, ಮಜ್ಜಿಗೆ ಕೊಡಲಾಗಿದೆ. ಬಳಿಕ, ಸಿದ್ದರಾಮಯ್ಯ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದೀಗ, ಸಿದ್ದರಾಮಯ್ಯ ಅವರು ಚೇತರಿಸಿಕೊಂಡಿದ್ದಾರೆ.