ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ನಾರಾಯಣ ರಾಜು ತಮ್ಮ ಅಬ್ಬರದ ಪ್ರಚಾರದ ನಡುವೆಯೇ ಎದುರಾಳಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೊಮ್ಮನಹಳ್ಳಿ ಮತಕ್ಷೇತ್ರದ ಪ್ರಚಾರದ ವೇಳೆ ಪವರ್ ಟಿವಿ ಜೊತೆಗೆ ಮಾತನಾಡಿರುವ ಅವರು, ಬೊಮ್ಮನಹಳ್ಳಿ ಹಳ್ಳಿ ಯಾರ ಟೆರಿಟರಿ ಅಲ್ಲ. ಇದು ಯಾವುದೋ ಪಾಕಿಸ್ತಾನ ಅಲ್ಲ, ಇರಾನ್ ಕೂಡ ಅಲ್ಲ ಎಂದು ಗುಡುಗಿದ್ದಾರೆ.
ಯಾರು ಅವರ ಟೆರಿಟರಿ ಅಂತ, ಅವರ ಏರಿಯಾ ಎಂದು ಹೇಳುತ್ತಾರೋ ಅಲ್ಲಿಗೆ ನಾನು ಭೇಟಿ ನೀಡುತ್ತೇನೆ. ಬೊಮ್ಮನಹಳ್ಳಿ ಯಾರ ಸ್ವತ್ತು ಅಲ್ಲ. ಬೂತ್ ಹಾಕಬಾರದು ಟೇಬಲ್ ಹಾಕಬಾರದು ಅಂತೆಲ್ಲ ಹೇಳಿದ್ದಾರೆ. ಅದಕ್ಕೆಲ್ಲ ಮತದಾರರು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದು ಕೆ.ನಾರಾಯಣ ರಾಜು ಟಕ್ಕರ್ ಕೊಟ್ಟಿದ್ದಾರೆ.
‘ಕೈ, ಕಮಲ‘ ನಾಯಕರಿಗೆ ಸವಾಲ್
ಮತದಾರರಿಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ಚೆನ್ನಾಗಿ ಗೊತ್ತಿದೆ. ಬೊಮ್ಮನಹಳ್ಳಿ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ. ನಾನು ಅವರ ಟೆರಿಟರಿ ಇಂದು ಹೇಳಿಕೊಳ್ಳುವ ಏರಿಯಾಗಳಲ್ಲಿ ನಾನು ಪ್ರಚಾರ ಮಾಡ್ತೀನಿ ಎಂದು ಪ್ರಬಲ ರಾಷ್ಟ್ರೀಯ ಪಕ್ಷಗಳ ಮೇಲೆ ನಾರಾಯಣರಾಜು ಕಿಡಿಕಾರಿದ್ದಾರೆ.
ಇದನ್ನು ಓದಿ : ‘ಕುಮಾರಣ್ಣ ಸಿಎಂ’ ಆಗೋದನ್ನು ಯಾರಿಂದಲೂ ತಡೆಯೋಕೆ ಆಗಲ್ಲ : ನಾಪಂಡ ಮುತ್ತಪ್ಪ
‘ದಳ‘ಕ್ಕೆ ಅಭೂತಪೂರ್ವ ಬೆಂಬಲ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾರಾಯಣರಾಜು ಅಬ್ಬರದ ಪ್ರಚಾರ ನಡೆಸಿದರು. ಗಾರೆಬಾವಿ ಪಾಳ್ಯ ಬಿಳೇಕಹಳ್ಳಿ ಕಡೆ ಮಹಿಳೆಯರು ಹಾಗೂ ಕಾರ್ಯಕರ್ತರ ಜೊತೆ ಮಾತಕತೆ ನಡೆಸಿದರು.
ಇದೇ ವೇಳೆ ಮಾಜಿ ಮುಖ್ಯಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಹತ್ವಕಾಂಕ್ಷೆಯ ಪಂಚರತ್ನ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಈ ಬಾರಿ ಕುಮಾರಣ್ಣ ಅವರ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮ ಸಂಕಷ್ಟಗಳೆಲ್ಲಾ ನಿವಾರಣೆಯಾಗುತ್ತವೆ ಎಂದು ಮತ ಬೇಟೆ ನಡೆಸಿದರು.