Sunday, October 6, 2024

ಎಣ್ಣೆ ಪ್ರಿಯರಿಗೆ ಶಾಕ್ : ರಾಜ್ಯದಲ್ಲಿ ಮೂರು ದಿನ ಬಾರ್ ಬಂದ್

ಬೆಂಗಳೂರು : ಮೇ 8ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ ಸ್ಥಗಿತವಾಗಲಿದ್ದು, ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದಂತಾಗಿದೆ.

ಹೌದು, ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕುರಿತಂತೆ ರಾಜ್ಯದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮೇ 8, 2023ರ ಸಂಜೆ 5 ಗಂಟೆಯಿಂದ ಮೇ 10, 2023ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಏಣಿಕೆ ಪ್ರಯುಕ್ತ ಮೇ 13, 2023ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮತದಾನ ಮತ್ತು ಮತ ಏಣಿಕೆಯ ಸಂದರ್ಭದಲ್ಲಿ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ, ಶುಷ್ಕ ದಿನ ಎಂದು ಘೋಷಿಸಲಾಗಿದೆ. ಮೇ.10ರಂದು ಮತದಾನ ನಡೆಯಲಿದ್ದು, ಮೇ.13ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ : ಮೇ 10 ಚುನಾವಣೆ, ಮೇ 13 ಫಲಿತಾಂಶ : ಇಲ್ಲಿದೆ ನೋಡಿ ಹೈಲೆಟ್ಸ್

ಮತದಾನಕ್ಕೆ ವ್ಯವಸ್ಥೆ?

  • ಒಟ್ಟು ಕೇಂದ್ರಗಳು: 58,281
  • ಸರಾಸರಿ 883 ಮತದಾರರಿಗೆ ಒಂದು ಕೇಂದ್ರ
  • ನಗರ ಮತದಾನ ಕೇಂದ್ರಗಳು: 24,063
  • ಗ್ರಾಮೀಣ ಮತದಾನ ಕೇಂದ್ರಗಳು: 34,219
  • ಮಹಿಳಾ ಮತದಾನ ಕೇಂದ್ರಗಳು: 1,320
  • ಯುವ ಮತದಾನ ಕೇಂದ್ರಗಳು: 224
  • ಪಿಡಬ್ಲ್ಯುಡಿ ಮ್ಯಾನೇಜ್ ಮತ ಕೇಂದ್ರಗಳು: 224
  • ಮಾದರಿ ಮತ ಕೇಂದ್ರಗಳು: 240
  • ವೆಬ್ ಕಾಸ್ಟಿಂಗ್: 29,141 (50%)

RELATED ARTICLES

Related Articles

TRENDING ARTICLES