Tuesday, November 5, 2024

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಔಟ್ : ಕಮಲ ನಾಯಕರ ‘ವಂಶಪಾರಂಪರ್ಯ’ ನೋಡಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಜೊತೆಗೆ, ಆರೋಪ ಪ್ರತ್ಯಾರೋಪಗಳ ಸುರಿಮಳೆಗೈಯ್ಯುತ್ತಿವೆ. ಆದ್ರೆ, ಹಿಂದಿನಿಂದಲೂ ಕುಟುಂಬ ರಾಜಕಾರಣದ ಟಾಫಿಕ್ ಬೇಜಾನ್ ಸದ್ದು ಮಾಡ್ತಿದೆ.

ಹೌದು, ಬಿಜೆಪಿಯವರೇ ಈ ವಿಷಯದ ಬಗ್ಗೆ ಹೆಚ್ಚು ಕೆದಕಿದ್ದು, ಟೀಕಿಸಿದ್ದು ಕೂಡ. ಪ್ರಧಾನಿ ನರೆಂದ್ರ ಮೋದಿಯಿಂದ ಹಿಡಿದು ಬಿಜೆಪಿಯ ತಳಹಂತದ ನಾಯಕರವರೆಗೆ ಎಲ್ಲರೂ ‘ವಂಶಪಾರಂಪರ್ಯ ರಾಜಕಾರಣ’ದ ವಿರುದ್ಧ ಮಾತನಾಡುತ್ತಾರೆ.

ಆದರೆ, ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣ ಇಲ್ಲವೇ? ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಲೇ ಬಂದಿವೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದ ‘ರಾಜಕೀಯ ವಂಶ’ಗಳ ಕುಡಿಗಳ ಲಿಸ್ಟ್ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ : ‘ದೇವೆಗೌಡ್ರು ಖರ್ಗೆಯನ್ನೇ ಸಿಎಂ ಮಾಡಿ’ ಅಂದಿದ್ರು, ಆಗ ಮಾಡಿದ್ರಾ? : ಎಚ್.ಡಿ ಕುಮಾರಸ್ವಾಮಿ

ಕರ್ನಾಟಕಕ್ಕೆ ಬಂದಾಗೆಲ್ಲಾ ನರೇಂದ್ರ ಮೋದಿ, ಅಮಿತ್ ಶಾ ಹೇಳುವುದು ಒಂದು, ಮಾಡುವುದು ಒಂದು. ರಾಜ್ಯ ಚುನಾವಣೆಗೆ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ನೀಡಿದ್ದೇವೆ. ಬಿಜೆಪಿ ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಜೆಡಿಎಸ್ ಪಕ್ಷ ಕುಟುಕಿದೆ.

  1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ವಂಶದಿಂದ ಬಂದವರು. ಅವರ ಅಪ್ಪ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.
  2. ಬಿ.ಎಸ್.ಯಡಿಯೂರಪ್ಪ ಅವರ ಒಬ್ಬ ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ. ಇನ್ನೊಬ್ಬ ಮಗ ಬಿ.ವೈ.ವಿಜಯೇಂದ್ರ ಶಿಕಾರಿಪುರದಲ್ಲಿ ಅಭ್ಯರ್ಥಿ.
  3. ರವಿ ಸುಬ್ರಹ್ಮಣ್ಯ ಬಸವನಗುಡಿ ಅಭ್ಯರ್ಥಿ, ಅವರ ಅಳಿಯ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಸಂಸದ.
  4. ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರ ಪುತ್ರ ಜಿ.ಬಿ ಜ್ಯೋತಿ ಗಣೇಶ್ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ.
  5. ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು.
  6. ಉಮೇಶ್ ಕತ್ತಿ ಸಹೋದರ ಮತ್ತು ಪುತ್ರ ಇಬ್ಬರೂ ಈ ಬಾರಿ ಬಿಜೆಪಿ ಅಭ್ಯರ್ಥಿಗಳು.
  7. ಸೋದರರಾದ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು.
  8. ಸಂಸದ ಶ್ರೀನಿವಾಸ ಪ್ರಸಾದ ಅವರ ಅಳಿಯ ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿ.
  9. ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರ ಪತ್ನಿ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿ.
  10. ಮಾಜಿ ಸಚಿವ ನಾಗಪ್ಪ ಅವರ ಪುತ್ರ ಪ್ರೀತಂ ನಾಗಪ್ಪ ಬಿಜೆಪಿ ಅಭ್ಯರ್ಥಿ
  11. ಸಂಸದ ಉಮೇಶ್ ಜಾದವ್ ಅವರ ಪುತ್ರ ಅವಿನಾಶ್ ಜಾದವ್ ಬಿಜೆಪಿ ಅಭ್ಯರ್ಥಿ.
  12. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಮಗ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ.
  13. ಮಾಜಿ ಶಾಸಕ ಚಂದ್ರಶೇಖರ ಪಾಟೀಲ್ ರೇವೂರ ಮಗ ದತ್ತಾತ್ರೇಯ ಪಾಟೀಲ್ ಬಿಜೆಪಿ ಅಭ್ಯರ್ಥಿ.
  14. ಮಾವ-ಅಳಿಯ ಶ್ರೀರಾಮುಲು, ಸುರೇಶ್ ಬಾಬು ಬಿಜೆಪಿ ಅಭ್ಯರ್ಥಿಗಳು.
  15. ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಮಗ ಅರವಿಂದ ಬೆಲ್ಲದ್ ಬಿಜೆಪಿ ಅಭ್ಯರ್ಥಿ.
  16. ಚಂದ್ರಕಾಂತ್ ಪಾಟೀಲ್ ಬಿಜೆಪಿ ಅಭ್ಯರ್ಥಿ. ಅವರ ಅಪ್ಪ ಮಾಜಿ ಎಂಎಲ್ ಸಿ
  17. ಸಪ್ತಗಿರಿ ಗೌಡ ಬಿಜೆಪಿ ಅಭ್ಯರ್ಥಿ. ಅವರ ತಂದೆ ರಾಮಚಂದ್ರಗೌಡ ಮಾಜಿ ಸಚಿವರು.
  18. ಮಾಜಿ ಶಾಸಕ ಅಯ್ಯಪ್ಪ ದೇಸಾಯಿ ಪುತ್ರ ಅಮೃತ್ ದೇಸಾಯಿ ಬಿಜೆಪಿ ಅಭ್ಯರ್ಥಿ.
  19. ಮಾಜಿ ಸಚಿವ ಆನಂದ್ ಸಿಂಗ್ ಮಗ ಸಿದ್ಧಾರ್ಥ್ ಸಿಂಗ್ ಬಿಜೆಪಿ ಅಭ್ಯರ್ಥಿ.
  20. ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಕೆ.ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ.

RELATED ARTICLES

Related Articles

TRENDING ARTICLES