Tuesday, November 5, 2024

ಆಂಧ್ರ ಸಿಎಂ ಪೋಸ್ಟರ್ ಹರಿದಿದ್ದಕ್ಕೆ ‘ನಾಯಿ ವಿರುದ್ಧ ಎಫ್ಐಆರ್’

ಬೆಂಗಳೂರು : ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ವೊಂದನ್ನು ಕಿತ್ತು ಹಾಕಿದ್ದಕ್ಕಾಗಿ ನಾಯಿಯೊಂದರ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ವೈಎಸ್ ಆರ್ ಕಾಂಗ್ರೆಸ್ ಪಾರ್ಟಿಯು ಆಂದ್ರಪ್ರದೇಶದಲ್ಲಿ ಮನೆ ಮನೆಗೆ ‘ನಮ್ಮ ನಂಬಿಕೆ ನೀವೇ ಜಗನ್’ ಎಂಬ ಸ್ಟಿಕರ್ ಗಳನ್ನು ಅಂಟಿಸುವ ಅಭಿಯಾನ ಪ್ರಾರಂಭಿಸಿದೆ. ವೈಎಸ್ ಆರ್ ಪಾರ್ಟಿಯ ಸಚಿವರು, ಶಾಸಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಈ ನಡುವೆ ವೈಎಸ್ ಆರ್ ಕಾರ್ಯಕರ್ತರು ಸ್ಟಿಕರ್ ಅಂಟಿಸುತ್ತಿದ್ದಂತೆಯೇ ನಾಯಿಯೊಂದ ಆ ಸ್ಟಿಕ್ಕರ್ ಅನ್ನು ಹರಿದು ಹಾಕಿರುವ ದೃಷ್ಯಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸಂಬಂಧ, ಮಹಿಳೆಯೊಬ್ಬರು ವಿಜಯವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆ ನಾಯಿಯನ್ನು ವಶಕ್ಕೆ ತೆಗೆದುಕೊಂಡು, ಈ ಷಡ್ಯಂತ್ರದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಮೋದಿಯವರೇ, ಬಂಡೀಪುರವನ್ನು ಅದಾನಿಗೆ ಮಾರಬೇಡಿ : ಕಾಂಗ್ರೆಸ್ ವ್ಯಂಗ್ಯ

ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಯಕರ್ತರು, ಆ ಸ್ಟಿಕ್ಕರ್ ತೆಗೆದು ಹಾಕಿರುವುದರಿಂದ ರಾಜ್ಯದ ನಾಲ್ಕು ಕೋಟಿ ಜನ ಬೆಚ್ಚಿಬಿದ್ದಿದ್ದಾರೆ. ನಾಯಿ ಜಗನ್​ ಅವರ ಪೋಸ್ಟರ್​ಗೆ ಅವಮಾನ ಮಾಡಿರುವುದು ತುಂಬಾ ದುಃಖಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಜಗನ್ ಅವರನ್ನು ತುಂಬಾ ಗೌರವಿಸುತ್ತೇವೆ. ಅವರಿಗೆ ಎಲ್ಲಿಯೂ ಅಗೌರವ ತೋರಬಾರದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗಬಹುದು ಎಂಬ ಉದ್ದೇಶದಿಂದ ಪೊಲೀಸರಿಗೆ ದೂರು ನೀಡಿದ್ದೇವೆ. ಕೂಡಲೇ ಆ ನಾಯಿಯಿಂದ ಈ ಕೆಲಸ ಮಾಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES