ಬೆಂಗಳೂರು : ‘ವೈಎಸ್ ವಿ ದತ್ತಾ ಅವರ ಬಳಿ ಇರೋದು ಎರಡೇ.. ಎರಡು..ಒಂದು ಪಂಚೆ, ಒಂದು ಶರ್ಟ್ ಅಷ್ಟೆ’ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಕಡೂರಿನ ಯಗಟಿ ಗ್ರಾಮದ ವೈಎಸ್ ವಿ ದತ್ತಾ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಮಿನಿಸ್ಟರ್ ಆದಾಗ ಕಾರ್ ಕೊಡುಸ್ತೀನಿ ಅಂದೆ. ಆಗ ದತ್ತಾ, ಬೇಡ ಸರ್.. ನಂಗೇ ಆಟೋನೆ ಸಾಕು ಅಂದಿದ್ರು ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ದೇವೆಗೌಡ್ರು ಬಂದೇ ಬರ್ತಾರೆ
ಏಪ್ರಿಲ್ 18ನೇ ತಾರೀಖು ವೈಎಸ್ ವಿ ದತ್ತಾ ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಂದು ಎಷ್ಟೇ ಕಷ್ಟ ಆದರೂ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಬರುತ್ತಾರೆ. ಬಂದೇ ಬರುತ್ತಾರೆ. ದತ್ತಾ ಅವರು ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡರು ಪಕ್ಕದಲ್ಲಿ ಕೂತಿರ್ತಾರೆ ಎಂದು ರೇವಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ ವಿ.ಶ್ರೀನಿವಾಸ ಪ್ರಸಾದ್
ಬದುಕಿರುವವರೆಗೇ ದತ್ತಾನ ‘ಕೈ‘ ಬಿಡಲ್ಲ
ನಾನು ಬದುಕಿರುವವರೆಗೇ ದತ್ತಾನ ಕೈ ಬಿಡಬಾರದು ಎಂದು ದೇವೇಗೌಡರು ಹೇಳಿದ್ದಾರೆ. ನೀವು ಬೇರೆ ಯೋಚನೆ ಮಾಡಬೇಡಿ, ದೇವೇಗೌಡರ ಮಾತನ್ನು ನಾನು, ದತ್ತ ಹಾಗೂ ನೀವು ಎಲ್ಲರೂ ಪಾಲಿಸಬೇಕು. ದತ್ತಾ ಅವರನ್ನು ಶಾಸಕ ಮಾಡ್ಲೇಬೇಕು ಅಂತ ದೇವೇಗೌಡರು ಹೇಳಿದ್ದಾರೆ ಎಂದಿದ್ದಾರೆ.
ನಾನು ದತ್ತಾ ಜೊತೆ ಇರುತ್ತೇನೆ
ನಮ್ಮ ಮನೆ ಎಲೆಕ್ಷನ್ ಅಂತ ಚುನಾವಣೆ ಮಾಡ್ತೀವಿ. ನಮಗೆ ಹೊಳೆನರಸೀಪುರ ಹಾಗೂ ಕಡೂರು ಬೇರೆ ಬೇರೆ ಅಲ್ಲ. ನಾನು ದತ್ತಾ ಜೊತೆ ಇರುತ್ತೇನೆ. ಅವರ ಪರ ಚುನಾವನಾ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಭರವಸೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಮಾತನಾಡಿ, ದತ್ತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬಾರರು ಎಂಬುಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಅಭಿಪ್ರಾಯವಾಗಿತ್ತು. ದತ್ತಾ ಜತೆಗೆ ನಮ್ಮ ಕುಟುಂಬ ಸದಾ ನಿಲ್ಲಲಿದೆ ಎಂದು ಹೇಳಿದ್ದಾರೆ.