ಬೆಂಗಳೂರು : ಬಿಜೆಪಿ ಟಿಕೆಟ್ ಕೈತಪ್ಪಿರುವುದರಿಂದ ಕಮಲ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ನಂಬಿಸಿ ಕತ್ತು ಕುಯ್ಯುವುದು’ ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್ ಎಂದು ಲೇವಡಿ ಮಾಡಿದೆ.
ಬಿಜೆಪಿ ಈಗ ಏಕಕಾಲಕ್ಕೆ ಎಲ್ಲವನ್ನೂ ಎದುರಿಸುತ್ತಿದೆ. ಕಣ್ಣೀರು ಪರ್ವ, ಬಂಡಾಯ ಪರ್ವ, ನಿವೃತ್ತಿ ಪರ್ವ, ಆಕ್ರೋಶ ಪರ್ವ, ರಾಜೀನಾಮೆ ಪರ್ವ. ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಬಿಜೆಪಿ ವರ್ಸಸ್ ಬಿಜೆಪಿ(BJPvsBJP) ಈ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಪೋಟಿಸುವುದು ನಿಶ್ಚಿತ ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿ ಈಗ ಏಕಕಾಲಕ್ಕೆ ಎಲ್ಲವನ್ನೂ ಎದುರಿಸುತ್ತಿದೆ.
ಕಣ್ಣೀರು ಪರ್ವ, ಬಂಡಾಯ ಪರ್ವ, ನಿವೃತ್ತಿ ಪರ್ವ, ಆಕ್ರೋಶ ಪರ್ವ, ರಾಜೀನಾಮೆ ಪರ್ವ!ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ #BJPvsBJP ಈ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಪೋಟಿಸುವುದು ನಿಶ್ಚಿತ.
"ನಂಬಿಸಿ ಕತ್ತು ಕುಯ್ಯುವುದು" ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್!
— Karnataka Congress (@INCKarnataka) April 12, 2023
ಇದನ್ನೂ ಓದಿ : ಬಿಜೆಪಿ ನಾಯಕರೇ, ಇದಕ್ಕೆ ಏನೆಂದು ಹೆಸರಿಡುತ್ತೀರಿ : ಕಾಂಗ್ರೆಸ್ ವ್ಯಂಗ್ಯ
ಅಶೋಕರನ್ನು ಬಲಿಪಶು
ಸಚಿವ ಆರ್. ಅಶೋಕ್ ಅವರಿಗೆ ಎರಡು ಟಿಕೆಟ್ ನೀಡಿರುವ ಬಿಜೆಪಿ ಕಾರ್ಯಕರ್ತರನ್ನು ಕಡೆಗಣನೆ ಮಾಡಿದೆ. ಎನ್. ಆರ್ ರಮೇಶ್‌ಗೆ ಒಂದೂ ಟಿಕೆಟ್ ನೀಡಿಲ್ಲ. ಬಿಜೆಪಿಯ ಪ್ರಯೋಗವು ಆರ್. ಅಶೋಕ್ ಅವರಿಗೆ “ಖೆಡ್ಡಾ”ವಾಗಿ ಪರಿಣಮಿಸಲಿದೆ ಎಂದು ಕುಟುಕಿದೆ. ಪದ್ಮನಾಭನಗರದಲ್ಲಿ ಬಂಡಾಯವೆದ್ದ ಎನ್.ಆರ್ ರಮೇಶ್ ಬಿಜೆಪಿಗೇ ಮಳುವಾಗುವುದು ನಿಶ್ಚಿತ. ಬಿಜೆಪಿ ವರ್ಸಸ್ ಬಿಜೆಪಿ (BJPvsBJP) ಕಿತ್ತಾಟವು ಅಶೋಕರನ್ನು ಬಲಿಪಶು ಮಾಡಲಿದೆ ಎಂದು ಬರೆದುಕೊಂಡಿದೆ.
ಆರ್. ಅಶೋಕ್ ಅವರಿಗೆ ಎರಡು ಟಿಕೆಟ್, ಎನ್. ಆರ್ ರಮೇಶ್‌ಗೆ ಒಂದೂ ಟಿಕೆಟ್ ಇಲ್ಲ.
ಬಿಜೆಪಿಯ ಪ್ರಯೋಗವು ಆರ್. ಅಶೋಕ್ರವರಿಗೆ "ಖೆಡ್ಡಾ"ವಾಗಿ ಪರಿಣಮಿಸಲಿದೆ.
ಪದ್ಮನಾಭನಗರದಲ್ಲಿ ಬಂಡಾಯವೆದ್ದ ಎನ್.ಆರ್ ರಮೇಶ್ ಬಿಜೆಪಿಗೇ ಮಳುವಾಗುವುದು ನಿಶ್ಚಿತ.#BJPvsBJP ಕಿತ್ತಾಟವು ಅಶೋಕರನ್ನು ಬಲಿಪಶು ಮಾಡಲಿದೆ! pic.twitter.com/FhGMFWg9aJ
— Karnataka Congress (@INCKarnataka) April 12, 2023
ಇದು ಬಿಜೆಪಿ ಮಹಿಮೆ
ಮಾಜಿ ಪೊಲೀಸ್ ಕಮಿಷನರ್ ಒಬ್ಬರು ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಒಬ್ಬನ ಮುಂದೆ ನಿಂತು ಕೈಮುಗಿದು ಬೆಂಬಲ ಕೋರುವುದು ಈ ವ್ಯವಸ್ಥೆಯ ದುರಂತ. ಈ ಚುನಾವಣೆಯಲ್ಲಿ ಬಿಜೆಪಿ ರೌಡಿ ಮೋರ್ಚಾ (BJPRowdyMorcha) ಪ್ರಭಲವಾಗಿ ಕೆಲಸ ಮಾಡುತ್ತಿದೆ ಎಂದರೆ ಮುಂದೆ ಬಿಜೆಪಿ ಕ್ರಿಮಿನಲ್‌ಗಳ ಸಾಮ್ರಾಜ್ಯ ಸ್ಥಾಪಿಸುತ್ತದೆ ಎಂದೇ ಅರ್ಥ. ಮತದಾರರು ಎಚ್ಚರಾಗಬೇಕು ಎಂದು ವಾಗ್ದಾಳಿ ನಡೆಸಿದೆ.