ಬೆಂಗಳೂರು : ಮುಂಬೈ ಹಾಗೂ ಚೆನ್ನೈ ನಡುವೆ ಇಂದು ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 158 ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ತವರು ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿದೆ. ಮುಂಬೈ ಪರ ನಾಯಕ ರೋಹಿತ್ 21, ಇಶಾನ್ 32, ಗ್ರೀನ್ 12, ತಿಲಕ್ ವರ್ಮಾ 22, ಟೀಮ್ ಡೇವಿಡ್ 31 ಹಾಗೂ ಹೃತಿಕ್ ಶೀಕಿನ್ 18 ರನ್ ಗಳಿಸಿದರು.
ಇನ್ನೂ ಮುಂಬೈ ಬ್ಯಾಟರ್ ಗಳನ್ನು ಕಟ್ಟಿಹಾಕಿದ ಚೆನ್ನೈ ಆಲ್ ರೌಂಡರ್ ಜಡೇಜಾ ಮೂರು ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಯಾಂಟ್ನರ್ ಹಾಗೂ ದೇಶಪಾಂಡೆ ತಲಾ ಎರಡು, ಮಂಗಲ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ : ‘ಧೋನಿ ಆರ್ಭಟಿಸಲಿ, ಆದ್ರೆ, ಮುಂಬೈ ಗೆಲ್ಲಲಿ’ : ಪ್ಯಾನ್ಸ್ ಹಂಬಲ್ ರಿಕ್ವೆಸ್ಟ್
ಡೆಲ್ಲಿಗೆ ಹ್ಯಾಟ್ರಿಕ್ ಸೋಲು
ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಡೆಲ್ಲಿ ಹೀನಾಯ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸಂಜು ಬಳಗ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. 200 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ 9 ವಿಕೆಟ್ ಗಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್.ಆರ್ ಪರ ಬೌಲ್ಟ್ ಹಾಗೂ ಚಹಾಲ್ ತಲಾ 3 ವಿಕೆಟ್, ಅಶ್ವಿನ್ 2 ವಿಕೆಟ್ ಪಡೆದು ಮಿಂಚಿದರು.