ಬೆಂಗಳೂರು : ಒಬ್ಬರೇ ಇದ್ದು ಏಕಾಂಗಿಯಾಗಿ ಬಿಜೆಪಿ ಪಕ್ಷವನ್ನು ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ. ಕರ್ನಾಟಕದಲ್ಲೂ ಕೂಡ ಬಹಳ ಆಳಾವಗಿ ಬೇರೂರಿರುವ ಪಕ್ಷ. ಅತ್ಯಂತ ಉತ್ತಮವಾಗಿರುವ ಒಂದು ಸಂಘಟನೆ ಇರುವ ಪಕ್ಷ. ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದಿರೋದು ತನ್ನದೇ ಆದ ಇತಿಹಾಸ ವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಒಬ್ಬರೇ ಇದ್ದು ಏಕಾಂಗಿ ಯಾಗಿ ಪಕ್ಷ ಬೆಳೆಸಿದವರು ಯಡಿಯೂರಪ್ಪನವರು. ಅವರ ನೇತೃತ್ವದಲ್ಲಿ ಬಿಜೆಪಿ ಪ್ರತಿ ಬಾರಿ ಬೆಳೆದುಕೊಂಡು ಬಂದಿದೆ. ಅನಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸ್ವಲ್ಪ ಬೆಳೆಯಿತು. ರೈತರಿಗೆ ವಿಶೇಷ ಬಜೆಟ್ ಕೊಡುವುದುರ ಜೊತೆಗೆ ಎಲ್ಲ ವರ್ಗಕ್ಕೂ ಹಲವು ಯೋಜನೆ ಕೊಟ್ಟಿದ್ದು ಬಿಜೆಪಿ ಎಂದು ಬೊಮ್ಮಾಯಿ ಹೇಳಿದ್ದಾರೆ.
ಮೋದಿ ಬಂದ್ಮೇಲೆ ದೊಡ್ಡ ಬದಲಾವಣೆ
ದೇಶದಲ್ಲಿದ್ದ ಯುಪಿಎ ಸರ್ಕಾರ ದೇಶದಲ್ಲಿ ಅಸ್ಥಿರತೆ ಉಂಟು ಮಾಡಿತ್ತು. ಆರ್ಥಿಕವಾಗಿ ಅಸ್ಥಿರತೆ ಬಂತು ಹಾಗೂ ಭ್ರಷ್ಟಾಚಾರದ ಸುರಿಮಳೆಯೇ ಬಂತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಳೆ ದೇಶದಲ್ಲಿ ದೊಡ್ಡ ಬದಲಾವಣೆ ಆಯ್ತು. ಪ್ರತಿ ಯೊಬ್ಬ ನಾಗರಿಕನಿಗೆ ಆತ್ಮವಿಶ್ವಾಸ ಮೂಡಬೇಕು. ನಾವು ಸುರಕ್ಷಿತವಾಗಿ ಇದ್ದೇವೆ ಎಂಬ ಭಾವನೆ ಬರಬೇಕು. ದೇಶದಲ್ಲಿ ಅತಿ ಹೆಚ್ಚು ರಸ್ತೆ, ವಿಮಾನ ನಿಲ್ದಾಣ ಎಲ್ಲವೂ ಅಭಿವೃದ್ಧಿ ಆಗಿದೆ ಎಂದು ತಿಳಿಸಿದ್ದಾರೆ.
ಸ್ವಚ್ಛ ಭಾರತ್ ಬಗ್ಗೆ ಹಾಸ್ಯ ಮಾಡಿದ್ರು
ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಬಗ್ಗೆ ಮಾತಾಡುವಾಗ ಹಾಸ್ಯ ಮಾಡಿದ್ದರು. ಒಂದು ಮನೆ ಸ್ವಚ್ಛದ ಬಗ್ಗೆ ಅರ್ಥ ಮಾಡಿಕೊಳ್ಳದೇ ಇರೋರು 70 ವರ್ಷ ಆಡಳಿತ ಮಾಡಿರೋದು ದುರ್ದೈವದ ಸಂಗತಿ. ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ, ಮನೆ-ಮನೆಗಳಿಗೆ ನೀರು ಕೊಟ್ಟಿದ್ದೇವೆ. ಇದು ಬಿಜೆಪಿ, ನರೇಂದ್ರ ಮೋದಿ ಹಾಗೂ ಡಬಲ್ ಇಂಜಿನ್ ಸರ್ಕಾರಗಳ ಕೆಲಸ ಎಂದು ಬಣ್ಣಿಸಿದ್ದಾರೆ.
ಶೌಚಾಲಯ, ಮನೆ ಮನೆಗೆ ಬೆಳಕು ಕೊಟ್ಟಿದ್ದೇವೆ. ಮಹಿಳೆಯರಿಗಾಗಿ ಸ್ತ್ರೀ ಸಾಮರ್ಥ್ಯ ಯೋಜನೆ ಮಾಡಿದ್ದೇವೆ. ಯುವ ಶಕ್ತಿ, ಮಹಿಳಾ ಶಕ್ತಿ, ಕಾಯಕ ಯೋಜನೆ. ದುಡಿಯವ ವರ್ಗಕ್ಕೆ ಗೌರವ ಮತ್ತು ಅವಕಾಶ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ. ದುಡ್ಡೇ ದೊಡ್ಡಪ್ಪ ತೆಗೆದು ದುಡಿಯುವುದೇ ದೊಡ್ಡಪ್ಪ ಮಾಡಿದ್ದು ನಮ್ಮ ಸರ್ಕಾರ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.