ಬೆಂಗಳೂರು : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರ ಹೆಚ್ಚಳ ಆದೇಶವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ.
ಎಕ್ಸ್‌ಪ್ರೆಸ್ ವೇ ಆರಂಭವಾದ 17 ದಿನದಲ್ಲೇ ಟೋಲ್ ಮೊತ್ತ ಹೆಚ್ಚಿಸಲು ಹೆದ್ದಾರಿ ಸಚಿವಾಲಯ ನಿರ್ಧರಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ್ದರಿಂದ, ಆದೇಶವನ್ನು ಹಿಂಪಡೆಯಲಾಗಿದೆ.
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ, ಹಳೆಯ ದರಕ್ಕಿಂತ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಲು ನಿರ್ಧರಿಸಲಾಗಿತ್ತು.
— Pratap Simha (@mepratap) March 31, 2023
ಟೋಲ್ ದರ ಎಷ್ಟಿತ್ತು?
ಕಾರ್, ವ್ಯಾನ್,ಜೀಪ್
- ಏಕಮುಖ-135
- ದ್ವಿಮುಖ ಸಂಚಾರ-205
- ಸ್ಥಳೀಯ ವಾಹನಗಳು-70
- ತಿಂಗಳ ಪಾಸ್-4,525
ಲಘು ವಾಹನಗಳು
- ಏಕಮುಖ-220
- ದ್ವಿಮುಖ ಸಂಚಾರ-330
- ಸ್ಥಳೀಯ ವಾಹನಗಳು-110
- ತಿಂಗಳ ಪಾಸ್-7,315
ಟ್ರಕ್, ಬಸ್, 2ಆಕ್ಸೆಲ್ ವೆಹಿಕಲ್ಸ್
- ಏಕಮುಖ-460
- ದ್ವಿಮುಖ ಸಂಚಾರ-690
- ಸ್ಥಳೀಯ ವಾಹನಗಳು-230
- ತಿಂಗಳ ಪಾಸ್-15,325