Friday, December 20, 2024

ಪವರ್ ಬೇಟೆ ನಂ.8 : 3 ಲಕ್ಷ ಡೀಲ್ ಫೈನಲ್, 1 ಲಕ್ಷ ಅಡ್ವಾನ್ಸ್ ಜೇಬಿಗಿಳಿಸಿದ ಶಾಸಕ ಹೂಲಗೇರಿ

ಬೆಂಗಳೂರು : ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಲಂಚಾವತಾರ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಟಾ ಬಯಲಾಗಿದೆ. ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 8ನೇ ಶಾಸಕ ಡಿ.ಎಸ್ ಹೂಲಗೇರಿ.

ಹೌದು, ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 3 ಕಿಲೋಮೀಟರ್​​​​ಗೆ 3 ಲಕ್ಷ ರೂಪಾಯಿ ಲಂಚಕ್ಕೆ ಫೈನಲ್ ಆಗಿ ಶಾಸಕ ಬಸನಗೌಡ ದದ್ದಲ್ ಡೀಲ್ ಕುದುರಿಸಿದ್ದಾರೆ.

ಲಿಂಗಸುಗೂರಿನಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆಗೆ ಶಾಸಕರು ಪವರ್ ಟಿವಿ ಪ್ರತಿನಿಧಿಯೊಂದಿಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಡೀಲ್ ಕುದುರಿಸಿದ್ದಾರೆ. 13 ಕಿಲೋಮೀಟರ್​​ನಲ್ಲಿ ಬಾಕಿ ಇರುವ 3 ಕಿ.ಮೀ. ಅಳವಡಿಕೆಗೆ ಡೀಲ್ ಮಾತುಕತೆ ನಡೆಸಿದ್ದಾರೆ.

ಪ್ರತೀ ಕಿಲೋಮೀಟರ್​ಗೆ 1 ಲಕ್ಷದಂತೆ 3 ಲಕ್ಷ ನೀಡುವಂತೆ ಶಾಸಕ ಡಿ.ಎಸ್.ಹೂಲಗೇರಿ ಡಿಮ್ಯಾಂಡ್​ಮಾಡಿದ್ದಾರೆ. ಅಡ್ವಾನ್ಸ್ ಆಗಿ ಸಹಾಯಕನ ಮೂಲಕ 1 ಲಕ್ಷ ರೂಪಾಯಿ ತನ್ನ ಜೇಬಿಗೆ ಇಳಿಸಿದ್ದಾರೆ.

 

ಡಿ.ಎಸ್.ಹೂಲಗೇರಿ

ಪಕ್ಷ: ಕಾಂಗ್ರೆಸ್

ಜಿಲ್ಲೆ: ರಾಯಚೂರು

ವಯಸ್ಸು : 61 ವರ್ಷ

ಕ್ಷೇತ್ರ: ಲಿಂಗಸುಗೂರು ವಿಧಾನಸಭಾ ಕ್ಷೇತ್ರ

ಜಿಲ್ಲೆ: ರಾಯಚೂರು

ಸ್ಥಳ: ಶಾಸಕರ ಭವನ, ಬೆಂಗಳೂರು

 

ಪ್ರಮುಖ ಅಂಶಗಳು:

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

ನೀರು ಬಂದಿಲ್ಲಂದ್ರೆ ಪುರಸಭೆ ಅಧ್ಯಕ್ಷಗೆ ಹೊಡೀರಿ ಎಂದಿದ್ದರು

ನೀರಿನ ಬಗ್ಗೆ ಫೋನ್ ಮಾಡಿದವರಿಗೆ ಶಾಸಕರ ಉಪದೇಶ

ಒಟ್ಟು ಆಸ್ತಿ : 10.75 ಕೋಟಿ

RELATED ARTICLES

Related Articles

TRENDING ARTICLES