Monday, May 6, 2024

ಮಂಡ್ಯದಲ್ಲಿ ಬೇರೆ ಯಾರು ಗಂಡ್ಸು ಇರಲಿಲ್ವಾ? : HDKಗೆ ಶಿವರಾಮೇಗೌಡರ ಪುತ್ರ ಪ್ರಶ್ನೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವನೆ ಫೀವರ್ ಹೆಚ್ಚಾಗುತ್ತಿದ್ದಂತೆಯೇ ಮಂಡ್ಯದಲ್ಲಿ ವೈಯಕ್ತಿಕ ವಿಷಯಗಳ ಆರೋಪ ಪ್ರತ್ಯಾರೋಪದ ಘಮಲು ಹೆಚ್ಚಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಎಲ್. ಆರ್ ಶಿವರಾಮೇಗೌಡ ಪುತ್ರ ಚೇತನ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಗಳೇ, ಮಂಡ್ಯ ಜಿಲ್ಲೆಯಲ್ಲಿ ಬೇರೆ ಯಾರು ಗಂಡ್ಸು ಇರಲಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪುತ್ರನಿಗೆ (ನಿಖಿಲ್ ಕುಮಾರಸ್ವಾಮಿ) ಲೋಕಸಭಾ ಟಿಕೆಟ್ ಕೊಟ್ರಲ್ಲ. ಲೋಕಸಭೆಗೆ ನಿಲ್ಲಿಸೋಕೆ ಯಾರು ಗಂಡ್ಸು ಇರಲಿಲ್ವಾ? ಚಲುವರಾಯಸ್ವಾಮಿ ಸೋಲಿಸೋಕೆ ನಮ್ಮ ಅಪ್ಪನ ಸಹಾಯ ಪಡೆದುಕೊಂಡ್ರಿ. ಯಾವುದೋ ಒಂದು ಆಡಿಯೋ ಮೂಲಕ ನಮ್ಮ ಅಪ್ಪನನ್ನು ಪಕ್ಷದಿಂದ ಉಚ್ಚಾಟನೆ ಮಾಡ್ತೀರಲ್ಲ ಎಂದು ಗುಡುಗಿದ್ದಾರೆ.

ಯಾರಾದರೂ ಗುಮಾಸ್ತ ನನ್ನು ಉಚ್ಚಾಟನೆ ಮಾಡಿದ್ರೆ ಕಾರಣ ಕೊಡ್ತಾರೆ. ಆದರೆ, ನಮ್ಮ ಅಪ್ಪನಿಗೆ ಯಾವುದೇ ಕಾರಣ ಇಲ್ದೇ  ಉಚ್ಚಾಟನೆ ಮಾಡಿದ್ರಿ. ನಮ್ಮ ಅಪ್ಪನ ಸಹಾಯ ಪಡೆದು ಕೊಂಡು ಕೊನೆಗೆ ಅವರ ಬೆನ್ನಿಗೆ ಚೂರಿ ಹಾಕಿ ಹೋದ್ರಲ್ಲ. ನಿಮಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ನೋಡ್ತಿರಿ ಎಂದು ಕುಮಾರಸ್ವಾಮಿ ವಿರುದ್ದ ಚೇತನ್ ಕಿಡಿಕಾರಿದ್ದಾರೆ.

ನಾಗಮಂಗಲಕ್ಕೆ ಬಿಜೆಪಿ ಅತ್ಯಗತ್ಯ

ಇತ್ತ, ಮಾಜಿ ಸಂಸದ ಶಿವರಾಮೇಗೌಡ, ನಾಗಮಂಗಲ ಬಿಜೆಪಿಯಿಂದ ದೂರ ಉಳಿದಿತ್ತು. ನಾಗಮಂಗಲಕ್ಕೆ ಬಿಜೆಪಿ ಅತ್ಯಗತ್ಯವಾಗಿ ಬೇಕು. ಬಿಜೆಪಿ ಪಕ್ಷ ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಬೇಕು ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಳಿವು ನೀಡಿದ್ದಾರೆ.

ಬಿ.ಎಸ್​ ಯಡಿಯೂರಪ್ಪ ಸಿಎಂ ಇದ್ದಾಗ ನಿಮಗೆ ಲೋಕಸಭೆಗೆ ಬಿ ಫಾರಂ ಕೊಟ್ಟಿದ್ದರು. 1.67  ಲಕ್ಷ ಮತ ಪಡೆದು ಆಗ ನಾನು ಸೋತೆ. ಬಳಿಕ ‌ನಾನು ಜೆಡಿಎಸ್​ಗೆ ಬಂದೆ. ಜೆಡಿಎಸ್ ನಲ್ಲಿ ನನ್ನನ್ನು ಬಳಸಿಕೊಂಡರು. ಎಚ್​.ಡಿ ದೇವೇಗೌಡರು, ಎಚ್.​ಡಿ ಕುಮಾರಸ್ವಾಮಿ ಅವರು ನನ್ನನ್ನು ಬಳಸಿಕೊಂಡರು ಎಂದು ಶಿವರಾಮೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

RELATED ARTICLES

Related Articles

TRENDING ARTICLES