ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೊಂಡ ಮರುದಿನವೇ ಕಿತ್ತು ಬಂದಿದೆ.
ಹೌದು, ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರ ಆಕ್ರೋಶದ ಬಳಿಕ, ದುರಸ್ತಿ ಕಾರ್ಯ ನಡೆದಿದೆ.
ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ರಸ್ತೆಯ (ಹೆದ್ದಾರಿ) ಅರ್ಧಭಾಗದಲ್ಲಿ ವಾಹನಗಳು ಓಡಾಟದಂತೆ ಬ್ಯಾರಿಕೇಡ್ ಹಾಕಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಲಾರಿ ಪಲ್ಟಿಯಾಗಿದ್ದು, ಕೆಎಸ್‌ಆರ್‌ಟಿಸಿ ವೊಲ್ವೊ ಬಸ್ ಸೇರಿದಂತೆ ಅನೇಕ ವಾಹನಗಳು ಸ್ಕಿಡ್ ಆಗಿದ್ದವು. ಆದರೆ, ಯಾವುದೇ ದುರಂತ ಸಂಭವಿಸಿರಲಿಲ್ಲ.
ಮಾಟಾಷ್ ಲೆಗ್ ಪರಿಣಾಮ?
ರಸ್ತೆ ಕಿತ್ತು ಬಂದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಾಗೂ 40% ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ. ಇದು ಮೋದಿ ಮಾಟಾಷ್ ಲೆಗ್ ಪರಿಣಾಮವೇ ಅಥವಾ ಭ್ರಷ್ಟ ಬಿಜೆಪಿ ಸರ್ಕಾರದ 40% ಕಮಿಷನ್ ಪ್ರಭಾವವೇ? ಇದನ್ನು ಮತ ನೀಡಿ ನೀಚರಿಗೆ ಅಧಿಕಾರ ಕೊಟ್ಟ ಮತದಾರರು ಅದರಲ್ಲೂ ಯುವ ಸಮೂಹ ಆತ್ಮಾವಲೋಕನ ಮಾಡಿಕೊಳ್ಳಬೇಕು! ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು, ಇದು 40% ಮಹಿಮೆಯೊ? 80%ಮಹಿಮೆಯೊ? ಎಂದು ಪ್ರಶ್ನೆ ಮಾಡಿದ್ದಾರೆ.