Friday, November 22, 2024

ಅಂಜನಾದ್ರಿ ಅಭಿವೃದ್ಧಿಗೆ 125 ಕೋಟಿ ರೂ. ಅನುಮೋದನೆ ದೊರೆತಿದೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು 125 ಕೋಟಿ ರೂ.ಗಳ ಅನುಮೋದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ, ಧಾರ್ಮಿಕ ಪ್ರವಾಸೀ ತಾಣವಾಗಬೇಕೆನ್ನುವುದು ನಮ್ಮ ಪರಿಕಲ್ಪನೆ ಎಂದು ತಿಳಿಸಿದ್ದಾರೆ.

ಈ ಕಾಮಗಾರಿಗೆ ಒಟ್ಟು 125 ಕೋಟಿ ರೂ.ಗಳ ಅನುಮೋದನೆ ದೊರೆತಿದೆ. ಮೊದಲನೇ ಹಂತದ ಯೋಜನೆ ಹಾಗೂ ಜಮೀನು ದೊರೆತಿರುವಲ್ಲಿ ಕೆಲಸ ಪ್ರಾರಂಭಸಲಾಗಿದೆ. ಭಕ್ತರು ಉಳಿದುಕೊಳ್ಳಲು ಡಾರ್ಮಿಟರಿ, ಪ್ರದಕ್ಷಿಣಾ ಪಥ, ಶಾಪಿಂಗ್ ಕಾಂಪ್ಲೆಕ್ಸ್ ಶೌಚಾಲಯ ನಿರ್ಮಾಣ ಮಾಡಲಾಗುವುದು. ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದಾದ ಕೂಡಲೇ ರೋಪ್ ವೇ ಮತ್ತಿತರ ಕಾಮಗಾರಿಗಳನ್ನು ಕೈಗೆಟ್ಟಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಬಿಜೆಪಿ ಸರ್ಕಾರಕ್ಕೆ ದೊರೆತಿರುವ ಸೌಭಾಗ್ಯ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಇಲ್ಲಿ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿ ಮಾಡುವ ಸೌಭಾಗ್ಯ ಬಿಜೆಪಿ ಸರ್ಕಾರಕ್ಕೆ ದೊರೆತಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಅಂಜನಾದ್ರಿಯ ಆಂಜನೇಯ ಇಡೀ ಮನುಕುಲಕ್ಕೆ ಆಶೀರ್ವಾದ ಮಾಡಲಿ. ಭಾರತ ಹಾಗೂ ಕನ್ನಡ ನಾಡಿನ ಸಮಸ್ತ ಜನಕ್ಕೆ ಆಶೀರ್ವಾದ ಮತ್ತು ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES