ಬೆಂಗಳೂರು : ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಇದರ ಬೆನ್ನಲ್ಲೇ ಈವರೆಗೆ ಮಾಡಾಳ್ ವಿರೂಪಾಕ್ಷ್ಪ ಮಾಡಿರುವ ಆಸ್ತಿ ವಿಚಾರಗಳು ಬಹಿರಂಗಗೊಳ್ಳುತ್ತಿವೆ.
ಹೌದು, ಮಾಡಾಳ್ ವಿರೂಪಾಕ್ಷಪ್ಪ ಮಣ್ಣಿನ ಮಗ ಎಂಬ ಸತ್ಯಾಂಶ ಬಹಿರಂಗಗೊಂಡ ಆಸ್ತಿ ದಾಖಲೆಗಳೇ ಸಾರಿ ಹೇಳುತ್ತಿದೆ. ಬರೋಬ್ಬರಿ 408 ಎಕರೆ ಭೂಮಿಯ ಒಡೆಯ ಈ ಮಾಡಾಳ್.
ಮಾಡಾಳ್ ವಿರೂಪಾಕ್ಷಪ್ಪ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಬರೋಬ್ಬರಿ 232 ಎಕರೆ ಭೂಮಿ ಹೊಂದಿದ್ದಾರೆ. ದಾವಣಗೆರೆ 64 ಎಕರೆ ಹೊಂದಿದ್ದಾರೆ. ಶಿವಮೊಗ್ಗ 60 ಎಕರೆ ಹಾಗೂ ನೂತನ ವಿಜಯನಗರ 52 ಎಕರೆ ಭೂಮಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ : ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕರಿಗಾಗಿ ಶೋಧ ಶುರು
ಕೋಟಿ ಕುಳ ಮಾಡಾಳ್
ಬಿಜೆಪಿ ಶಾಸಕ ಕೋಟಿ ಕುಳ ಎಂಬುದನ್ನು ಕೇಳಿ ಕೆಲ ಬಿಜೆಪಿ ನಾಯಕರುಗಳೇ ಬೆಚ್ಚಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕರ 8.28 ಕೋಟಿ ರೂ. ನಗದು, 4.4 ಕಿಲೋ ಚಿನ್ನಾಭರಣ, 26 ಕಿಲೋ ಬೆಳ್ಳಿ, ಎರಡು ಐಷಾರಾಮಿ ಕಾರುಗಳು ಪತ್ತೆಯಾಗಿವೆ.
ಬಂಧನ ಭೀತಿಯಿಂದ ನಾಪತ್ತೆ
ಲಂಚ ಪ್ರಕರಣದಲ್ಲಿ ಮಗ ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳುತ್ತಿದ್ದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಚನ್ನಗಿರಿ ಹಾಗೂ ಬೆಂಗಳೂರಿನ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಂತೆಯೇ ಮಾಡಾಳ್ ತಲೆಮರೆಸಿಕೊಂಡಿದ್ದಾರೆ. ಇನ್ನೂ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಡಾಳ್ ಹುಡುಕಾಟಕ್ಕೆ ಅಧಿಕಾರಿಗಳು ಕಾರ್ಯ ಆರಂಭಿಸಿದ್ದಾರೆ.