Friday, June 6, 2025

‘ಸಿನಿಮಾ ತುಂಬಾ ಕೆಟ್ಟದಾಗಿದೆ’; ಥಗ್​ಲೈಫ್​ ಸಿನಿಮಾಗೆ ಛೀಮಾರಿ ಹಾಕಿದ ತಮಿಳು ಪ್ರೇಕ್ಷಕರು

ಕಮಲ್​ ಹಾಸನ್​ ಅಭಿನಯಿಸಿ, ನಿರ್ಮಾಣ ಮಾಡಿರುವ “ಥಗ್​ಲೈಫ್​” ಇಂದು ಕರ್ನಾಟಕ ಬಿಟ್ಟು, ದೇಶದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಸಿನಿಮಾ ತಮಿಳುನಾಡಿನಲ್ಲೇ ನಕರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಈ ಮೂಲಕ ಚಿತ್ರ ಮಕಾಡೆ ಮಲಗಿಕೊಳ್ಳೋದು ಬಹುತೇಕ ಖಚಿತ ಅನ್ನೋ ವಾತವರಣ ನಿರ್ಮಾಣವಾಗಿದೆ.

ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಕನ್ನಡಿಗರಿಂದ ಛೀಮಾರಿ ಹಾಕಿಸಿಕೊಂಡಿರುವ ನಟ ಕಮಲ್​ ಹಾಸನ್​ ಅಭಿನಯದ ‘ಥಗ್​ಲೈಫ್​’ ಸಿನಿಮಾ ಬಿಡುಗಡೆಯಾಗಿದೆ. ವಿವಾದದ ನಂತರವೂ ಕನ್ನಡಿಗರ ಕ್ಷಮೆ ಕೇಳದೆ, ತಮಿಳುನಾಡಿನಿಂದಲೇ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿರುವ ನಟ ಕಮಲ್​ ಸಿನಿಮಾಗೆ ತಮಿಳುನಾಡಿನಲ್ಲೇ ಜನರು ನೆಗೆಟಿವ್​ ವಿಮರ್ಶೆ ನೀಡಿದ್ದಾರೆ. ಇದನ್ನೂ ಓದಿ :ಭೀಕರ ಕಾಲ್ತುಳಿತ; ವರ್ಷದ ಹಿಂದೆ ಮದುವೆ, ಪತಿ ಜೊತೆ ಸ್ಟೇಡಿಯಂಗೆ ಬಂದಿದ್ದ ಪತ್ನಿ ಸಾವು

ಈ ಕುರಿತು ತಮಿಳು ನಾಡಿನ ಕೆಲವು ಯೂಟ್ಯೂವರ್​ಗಳು ಜನರಿಂದ ವಿಮರ್ಶೆ ಕಲೆ ಹಾಕಿದ್ದು. ಇದರಲ್ಲಿ ಜನರು ಸಿನಿಮಾ ಬಗ್ಗೆ ನಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿ ಕಮಲ್​ ಆ್ಯಕ್ಟಿಂಗ್​ ಬಿಟ್ಟರೆ ಸ್ಟೋರಿ ಸರಿಯಾಗಿಲ್ಲ, ಜೊತೆಗೆ ಬೇರೆ ಸ್ಟಾರ್​ ನಟರ್ಯಾರು ಇಲ್ಲ ಎಂದು, ಸಿನಿಮಾ ತುಂಭಾ ನಿಧಾನವಾಗಿ ಸಾಗಿಸುತ್ತದೆ, ಕಥೆ ಬಗ್ಗೆ ಇನ್ನು ಹೆಚ್ಚು ಕೆಲಸ ಮಾಡಬೇಕಿತ್ತು ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ :RCB ಅಭಿಮಾನಿಗಳಿಗೆ ಕೊಟ್ಟಿದ್ದ ಮಾತು ಈಡೇರಿಸಿದ ಕೃನಾಲ್​ ಪಾಂಡ್ಯ

ಇನ್ನು ಸೋಷಿಯಲ್​ ಮಿಡಿಯಾದಲ್ಲೂ ಜನರು ಕಮಲ್​ ಹಾಸನ್​ ಕಾಲೆಳೆದಿದ್ದು. ‘ಅತಿ ಕೆಟ್ಟ ಸಿನಿಮಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರವು ಈ ಮೊದಲು ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಈಗ ಅನೇಕರು ‘ಥಗ್ ಲೈಫ್’ ನೋಡಿ ‘ಇಂಡಿಯನ್ 2’ ಚಿತ್ರವೇ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದರೆ ‘ಥಗ್ ಲೈಫ್’ ಚಿತ್ರ ಅದೆಷ್ಟು ಕೆಟ್ಟದಾಗಿ ಇರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ. ಇದನ್ನೂ ಓದಿ :RCB ಗೆಲುವನ್ನು ಸಂಭ್ರಮಿಸುತ್ತಿದ್ದ ಯುವಕನಿಗೆ ಚಾಕು ಇರಿದ ದುಷ್ಕರ್ಮಿ

RELATED ARTICLES

Related Articles

TRENDING ARTICLES