Tuesday, May 6, 2025

ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದ ವಧು ಹೃದಯಘಾತದಿಂದ ಸಾ*ವು

ಬದೌನ್: ಮದುವೆಯ ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದ ವಧುವೊಬ್ಬಳು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬದೌನ್​​ನಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು 22 ವರ್ಷದ ದೀಕ್ಷಾ ಎಂದು ಗುರುತಿಸಲಾಗಿದೆ. ಇಸ್ಲಾಂನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೇ.4 ರಾತ್ರಿ ಬದೌನ್ ಜಿಲ್ಲೆಯ, ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೂರ್ಪುರ್ ಪಿನೋನಿ ಗ್ರಾಮದಲ್ಲಿ ಘಟನೆ ನಡೆದಿದೆ. ವಧು ದೀಕ್ಷಾ ಕುಟುಂಬಸ್ಥರು ಆಕೆಯ ಮದುವೆಯನ್ನು ಅದ್ದೂರಿಯಾಗಿ ನಡೆಸಲು ತಯಾರಿ ನಡೆಸಿದ್ದರು. ಮನೆ ತುಂಬಾ ನಗು, ಸಂಗೀತಾ, ನೃತ್ಯವೇ ತುಂಬಿತ್ತು. ದೀಕ್ಷಾ ಕೂಡಾ ಅರಿಶಿನ ಶಾಸ್ತ್ರದ ಆಚರಣೆಯ ನಂತರ ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಳು. ಆದರೆ ಈ ವೇಳೆ ಆಕೆ ಅಸ್ವಸ್ಥಳಾಗಿದ್ದಾಳೆ. ಅಲ್ಲಿಂದ ಸ್ನಾನದ ಗೃಹಕ್ಕೆ ಹೋಗಿದ್ದಾಳೆ. ಇದನ್ನೂ ಓದಿ :ಯುದ್ದದ ಕಾರ್ಮೋಡ: ನಾಗರಿಕರ ರಕ್ಷಣೆಗಾಗಿ ‘ಮಾಕ್​ ಡ್ರಿಲ್’​ ಕೈಗೊಳ್ಳುವಂತೆ ಗೃಹ ಇಲಾಖೆ ಸೂಚನೆ

ಈ ವೇಳೆ ಅಲ್ಲಿ ತೀವ್ರ ಹೃದಯಘಾತದಿಂದ ಕುಸಿದುಬಿದಿದ್ದಾಳೆ. ಈ ವೇಳೆ ಅಲ್ಲಿದ್ದವರು ಸಹಾಯ ಮಾಡಲು ತಕ್ಷಣ ಪ್ರಯತ್ನಿಸಿದರೂ ಯುವತಿಯನ್ನು ಉಳಿಸಲಾಗಲಿಲ್ಲ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಆಕೆಗೆ ಹೃದಯಾಘಾತವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ :ಯುದ್ಧ ನಡೆದರೆ ನಾವು ಭಾರತದ ಜೊತೆ ನಿಲ್ಲಬೇಕು: ಪಾಕ್‌ನಲ್ಲಿರುವ ಪಶ್ತೂನ್‌ ಮುಸ್ಲಿಮರಿಗೆ ಕರೆ

ಇನ್ನು ಮಗಳನ್ನು ಕಳೆದುಕೊಂಡು ಆಘಾತದಲ್ಲಿರುವ ಯುವತಿಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು. ಮನೆಯಲ್ಲಿ ಶೋಕ ಮಡುಗಟ್ಟಿದೆ. ಇನ್ನು ಸ್ಥಳೀಯ ನಿವಾಸಿಯೊಬ್ಬರು, “ಆ ಹುಡುಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಳು. ಅವಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆಕೆಗೆ ಇಂತಹ ದುರಂತ ಸಾವು ಸಂಭವಿಸಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ” ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES