Sunday, January 26, 2025

ಅಂತರ್​​ರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಆರ್​. ಅಶ್ವಿನ್​ !

ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಸ್ಟಾರ್​​ ಸ್ಪಿನರ್​​ ಅಶ್ವಿನ್​​ ನಿವೃತ್ತಿ ಘೋಷಿಸಿದ್ದು. ಕೂಡಲೆ  ಜಾರಿಗೆ ಬರುವಂತೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ. 
106 ಟೆಸ್ಟ್‌ ಪಂದ್ಯದಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳೊಂದಿಗೆ  ಅಶ್ವಿನ್ ತನ್ನ ಟೆಸ್ಟ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದು. ಅನಿಲ್​ ಕುಂಬ್ಳೆ ನಂತರ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೆ ಅಶ್ವಿನ್​ ಪಾತ್ರರಾಗಿದ್ದಾರೆ. 
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರು ಪಂದ್ಯಗಳಲ್ಲಿ ಕೇವಲ 1 ವಿಕೆಟ್​ ಪಡೆದಿದ್ದು ಅಶ್ವಿನ್​. 53 ರನ್​​ಗಳನ್ನು ನೀಡಿದ್ದರು. ಹಿಂದಿನ ಟೆಸ್ಟ್​ ಸರಣಿಯಲ್ಲಿಯೂ ಕಳಪೆ ಫಾರ್ಮ್​ ತೋರಿಸಿದ್ದ ಅಶ್ವಿನ್​ ಅಂತರ್​ ರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನಕ್ಕೆ ಗುಡ್​ಬಾಯ್​ ಹೇಳಿದ್ದಾರೆ.
39 ವರ್ಷದ ಅಶ್ವಿನ್​ ಅಂತರ್​ ರಾಷ್ಟ್ರೀಯ ಟೆಸ್ಟ್​ ವೃತ್ತಿ ಜೀವನದಲ್ಲಿ 6 ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3000ಕ್ಕೂ ಹೆಚ್ಚು ರನ್​ಗಳನ್ನು ಗಳಿಸಿ ಭಾರತದ ಪ್ರಮುಖ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದ ಅಶ್ವಿನ್​ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ ಮತ್ತು ಈ ಬಾರಿಯ 2025ರ ಐಪಿಎಲ್​​ನಲ್ಲಿ ಚೆನೈ ಪರ ಆಟವಾಡಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES