Thursday, January 23, 2025

ಅತುಲ್​ ಸುಭಾಷ್​ ಪ್ರಕರಣ: ಕುಡಿದು ಬಂದು ಹಲ್ಲೆ ಮಾಡುತ್ತಿದ್ದ ಎಂದ ಪತ್ನಿ ನಿಖಿತಾ !

ಬೆಂಗಳೂರು : ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಟೆಕ್ಕಿ ಅತುಲ್ ಸುಭಾಷ್ ಸಾವಿನ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪೋಲಿಸರ ವಿಚಾರಣೆ ವೇಳೆ ಆರೋಪಿ ಪತ್ನಿ ನಾನೇ ನಿಜವಾದ ಸಂತ್ರಸ್ತೆ ನನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾಳೆ.

ಮಾರತ್ ಹಳ್ಳಿಯ ಟೆಕ್ಕಿ‌ಸುಭಾಷ್ ಪ್ರಕರಣದ ಆರೋಪಿ ನಿಖಿತಾರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ಪೋಲಿಸರ ಮುಂದೆ ಶಾಕಿಂಗ್ ಸ್ಟೇಟ್​ಮೆಂಟ್ ನೀಡಿದ್ದಾಳೆ. ನನ್ನ ಈಗೀನ ಪರಿಸ್ಥಿತಿಗೆ ನನ್ನ ಪತಿ ಮೃತ ಸುಭಾಷ್ ಅತುಲ್ ಕಾರಣ, ನನಗೆ ನಾನ್ ವೆಜ್ ಅಡುಗೆ ಮಾಡಲು ಬರೋದಿಲ್ಲ , ಅದು‌ ಗೊತ್ತಿದ್ದು ಮಟನ್ , ಚಿಕನ್ ಮೀನು ತಂದು ನಾನು‌ ಹೇಳುವ ಹಾಗೇ ಮಾಡು ಎಂದು ಟಾರ್ಚರ್ ಕೊಡ್ತಿದ್ದ , ಕುಡಿದು ಬಂದು ಅಡುಗೆ ಚೆನ್ನಾಗಿ ಮಾಡಿಲ್ಲ ಎಂದು ಹಲ್ಲೆ ಮಾಡಿ ಕಿರುಕುಳ ಕೊಡುತ್ತಿದ್ದ ಎಂದು ಹೇಳಿದ್ದಾಳೆ.

ಇದನ್ನೂ ಓದಿ : ಜಿಲ್ಲಾಸ್ಪತ್ರೆಯ ಮೇಲ್ಚಾವಣಿ ಕುಸಿತ : 2 ವರ್ಷದ ಮಗು ಸೇರಿ ಮೂವರಿಗೆ ಗಾಯ !

ಇನ್ನೂ ಅಡಿಗೆ ವಿಚಾರ ಒಂದು ಕಡೆ ಮರ್ಯಾದೆಯಿಂದ ಹೇಳಿ ಕೊಳ್ಳದ ಅನೇಕ ವಿಚಾರಗಳು ಕೂಡ ಇವೆ, ಚಿತ್ರಹಿಂಸೆ ಕೊಡುತ್ತಿದ್ದ ,ಮನೆ ಬಿಟ್ಟು ಹೋಗುವಂತೆ ಮಾಡಿದ್ದು ಅತುಲ್ ಹೊರತು ನಾನಲ್ಲ ಅತುಲ್ ನೀಡಿದ ಹಿಂಸೆಯನ್ನು ಸಹಿಸಿಕೊಂಡು ಜೀವನ ಮಾಡುತ್ತಿದ್ದೆ ನನನ್ನ ಯಾಕೆ ಅರೆಸ್ಟ್ ಮಾಡಿದ್ರಿ ಇದರಲ್ಲಿ ನಾನು ನಿಜವಾದ ಸಂತ್ರಸ್ತೆ ಎಂದು ಪೋಲಿಸರ ತನಿಖೆಯಲ್ಲಿ ಹೇಳಿಕೊಂಡಿದ್ದಾಳೆ.ಸುಭಾಷ್ ವಿಡಿಯೋ ಮಾಡಿ ಸುಸೈಡ್ ‌ಮಾಡಿಕೊಂಡಿದ್ದು ಪತ್ನಿ, ಅತ್ತೆ, ಬಾಮೈದ ಸೇರಿ ನಾಲ್ಕು ಜನರ ವಿರುದ್ಧ ಮಾರತ್ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆರೋಪಿಗಳನ್ನ ಅಲಹಾಬಾದ್, ಗುರುಗ್ರಾಂದಿಂದ ವಶಕ್ಕೆ ಪಡೆದು ಕರೆತಂದಿದ್ರು.

ಒಟ್ಟಾರೆ ಪ್ರಕರಣಲ್ಲಿ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನ ವಿಚಾರಣೆ ಮಾಡಲು ಬಾಡಿವಾರೆಂಟ್ ಮೇಲೆ ಕಸ್ಟಡಿ ಗೆ ಪಡೆದು ವಿಚಾರಣೆ ಮಾಡೋದಕ್ಕೆ ಖಾಕಿ ಟೀಂ ಮುಂದಾಗಿದೆ. ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಮೃತನ ತಂದೆ ಆಗ್ರಹ ಮಾಡುತ್ತಿದ್ದು, ಆರೋಪಿಗಳು ನಾವೇ ನಿಜವಾದ ಸಂತ್ರಸ್ತರು ಎನ್ನುತ್ತಿದ್ದಾರೆ .ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಕಾಲವೇ ಉತ್ತರ ಹೇಳಬೇಕಿದೆ.

RELATED ARTICLES

Related Articles

TRENDING ARTICLES