Monday, January 27, 2025

ಪಿ.ವಿ ಸಿಂಧು ನಿಶ್ಚಿತಾರ್ಥ : ಇದೇ ತಿಂಗಳ ಅಂತ್ಯದಲ್ಲಿ ಮದುವೆ ಫಿಕ್ಸ್​ !

ಹೈದರಾಬಾದ್​ : ಭಾರತದ ಒಲಂಪಿಕ್​ ಪದಕ ವಿಜೇತೆ ಪಿ.ವಿ ಸಿಂಧು ಅವರ ನಿಶ್ಚಿತಾರ್ಥವಾಗಿದೆ ಎಂದು ತಿಳಿದು ಬಂದಿದ್ದು. ಇದೇ ತಿಂಗಳ 22ರಂದು ಉದಯಪುರದಲ್ಲಿ ಅವರ ವಿವಾಹವಾಗಲಿದೆ ಎಂದು ಮಾಹಿತಿ ದೊರೆತಿದೆ.

ಡಬಲ್ ಒಲಿಂಪಿಕ್ ಮೆಡಲ್ ವಿಜೇತೆ ಪಿ.ವಿ. ಸಿಂಧು, ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್ ನ ಸಿಇಒ ವೆಂಕಟ ದತ್ತಾ ಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಸಿಂಧು ಶನಿವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿವೆ. ಫೋಟೋದಲ್ಲಿ, ಸಿಂಧು ಮತ್ತು ವೆಂಕಟ ಇಬ್ಬರೂ ತಮ್ಮ ಕೈಯಲ್ಲಿ ಉಂಗುರಗಳನ್ನು ಧರಿಸಿ ನಗುತ್ತಿರುವುದನ್ನು ಕಾಣಬಹುದು. ಈ ಜೋಡಿ ಡಿಸೆಂಬರ್ 22 ರಂದು ಉದಯಪುರದಲ್ಲಿ ಮದುವೆಯಾಗಲಿದ್ದಾರೆ.

ಡಿಸೆಂಬರ್ 20 ರಿಂದ ಮದುವೆ ಸಮಾರಂಭಗಳು ಶುರುವಾಗಲಿದ್ದು, ಹೈದರಾಬಾದ್ ನಲ್ಲಿ ಆರತಕ್ಷತೆ ನಡೆಯಲಿದೆ. ನಂತರ, ಸಿಂಧು ಮುಂಬರುವ ಪ್ರಮುಖ ಸೀಸನ್‌ಗಾಗಿ ತಮ್ಮ ತರಬೇತಿಯನ್ನು ಪುನರಾರಂಭಿಸಲಿದ್ದಾರೆ.

ಸಿಂಧು ಅವರ ತಂದೆಯ ಪ್ರಕಾರ, ಎರಡೂ ಕುಟುಂಬಗಳು ಪರಸ್ಪರ ಚೆನ್ನಾಗಿ ತಿಳಿದಿವೆ, ಆದರೆ ಮದುವೆಯ ಯೋಜನೆ ಒಂದು ತಿಂಗಳ ಹಿಂದೆಯೇ ಬಂದಿತು. ಮುಂದಿನ ವರ್ಷ ತರಬೇತಿ ಮತ್ತು ಪಂದ್ಯಗಳಲ್ಲಿ ಸಿಂಧು ಬ್ಯುಸಿ ಇರುವುದರಿಂದ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ

RELATED ARTICLES

Related Articles

TRENDING ARTICLES