Thursday, January 16, 2025

ನಟ ಅಲ್ಲು ಅರ್ಜುನ್​ಗೆ ಜಾಮೀನು ನೀಡಿದ ತೆಲಂಗಾಣ​ ಹೈಕೋರ್ಟ್​ !

ಹೈದರಾಬಾದ್​ : ಪುಷ್ಪ 2 ಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತವಾಗಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಖ್ಯಾತ ನಟ ಅಲ್ಲು ಅರ್ಜುನ್​ರನ್ನು ಇಂದು ಬೆಳಿಗ್ಗೆ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದರು. ಇದೀಗ ನ್ಯಾಯಾಲಯ ಅಲ್ಲು ಅರ್ಜುನ್​ಗೆ ಹೈದರಾಬಾದ್​ ಉಚ್ಚ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ ಎಂದು ಮಾಹಿತಿ ದೊರೆತಿದೆ.

ಇಂದು ಬೆಳಿಗ್ಗೆ ಪೋಲಿಸರು ಅಲ್ಲು ಅರ್ಜುನ್​ ಅವರ ನಿವಾಸಕ್ಕೆ ತೆರಳಿ ಅವರನ್ನು ಬಂಧಿಸಿದ್ದರು. ಬಂಧಿಸಿದ ನಂತರ ಗಾಂಧಿ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಮಾಡಿಸಿದ್ದ ಪೋಲಿಸರು. ಮಧ್ಯಾಹ್ನಾದ ಹೊತ್ತಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನಾಂಪಲ್ಲಿ ನ್ಯಾಯಾಲಯ ನಟನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು ಮತ್ತು ಅಲ್ಲು ಅರ್ಜುನ್​ರನ್ನು ಚಂಚಲಗೂಡು ಕಾರಗೃಹಕ್ಕೆ ಶಿಫ್ಟ್​ ಮಾಡುಬೇಕು ಎಂದು ಆದೇಶಿಸಿತ್ತು.

ಇದಕ್ಕೆ ಪ್ರತಿಯಾಗಿ ಅಲ್ಲು ಅರ್ಜುನ್​ ಪರ ವಕೀಲರು ಹೈದರಾಬಾದ್​ ಹೈಕೋರ್ಟ್​ಗೆ ಜಾಮೀನು ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಅಲ್ಲು ಅರ್ಜುನ್​ಗೆ ಷರತ್ತುಬದ್ದ ಜಾಮೀನು ನೀಡಿದೆ ಎಂದು ಮಾಹಿತಿ ಲಭಿಸಿದೆ.

RELATED ARTICLES

Related Articles

TRENDING ARTICLES