Wednesday, January 22, 2025

ಬೆಂಗಳೂರಿಗೆ ಸಿಲಿಕಾನ್​ ವ್ಯಾಲಿ ಎಂಬ ಗರಿಮೆ ತಂದು ಕೊಟ್ಟ ಧೀಮಂತ ನಾಯಕ ಎಸ್​.ಎಂ ಕೃಷ್ಣ

ಬೆಂಗಳೂರು : 1999 ರಿಂದ 2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಎಸ್​ಎಂ ಕೃಷ್ಣ ಅವರು. ಹಲವಾರು ಸಮಸ್ಯೆಗಳ ನಡುವೆಯು ಬೆಂಗಳೂರನ್ನು ವಿಶ್ವದ ಶ್ರೇಷ್ಟ ನಗರವನ್ನಾಗಿ ನಿರ್ಮಿಸಬೇಕು ಎಂದು ಕನಸು ಕಟ್ಟಿಕೊಂಡರು.

ಇದರ ಹಿನ್ನಲೆಯಲ್ಲೆ ಕೆಲಸ ಮಾಡಿದ ಎಸ್​.ಎಂ ಕೃಷ್ಣ, ದೇಶ-ವಿದೇಶದ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾ ಹೂಡಿಕೆ ಮಾಡುವಂತೆ ಮಾಡಿದ್ದರು. ಸಿಲಿಕಾನ್ ಸಿಟಿ ಎಂಬ ಹೆಸರಿಗೆ ಎಸ್ಎಂ ಕೃಷ್ಣ ಅಡಿಪಾಯ ಹಾಕಿದ್ದರು. ದೊಡ್ಡ ಐಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಲು ಎಸ್ ಎಂ ಕೃಷ್ಣ ತಂದ ಹಲವು ಯೋಜನೆಗಳು ಕಾರಣಗಳಾಗಿದ್ದವು. ಈ ಸಂದರ್ಭದಲ್ಲಿ ಬೆಂಗಳೂರಿಗೆ ಹೈದರಾಬಾದ್ ನಗರ ಸ್ಪರ್ಧೆ ನೀಡಿತ್ತು. ಆದರೆ ಬೆಂಗಳೂರಿನ ವಾತಾವರಣದಿಂದ ಹಲವು ಕಂಪನಿಗಳು ಇಂದು ರಾಜಧಾನಿಯಲ್ಲಿ ನೆಲೆಯೂರಿವೆ.

ಬೆಂಗಳೂರು ನಗರವನ್ನು ಸಿಂಗಪುರ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಎಸ್ಎಂ ಕೃಷ್ಣ ಕನಸು ಕಂಡಿದ್ದರು. ಇದರ ಮೊದಲ ಭಾಗವಾಗಿಯೇ ಮಾಹಿತಿ ತಂತ್ರಜ್ಞಾನಕ್ಕೆ ಪ್ರಾಶಸ್ತ್ಯ ನೀಡಿದ್ದರು. ಉದ್ಯಮಗಳ ಸ್ಥಾಪನೆಗೆ ವಿವಿಧ ಕಂಪನಿಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟರು. ಐಟಿ ಹಬ್, ಸಿಲಿಕಾನ್ ಸಿಟಿ ಅಂತ ಬೆಂಗಳೂರು ಜಾಗತೀಕಮಟ್ಟದಲ್ಲಿ ಗುರುತಿಸಿಕೊಳ್ಳಲು ಎಸ್‌ಎಂ ಕೃಷ್ಣ ಅವರು ಕಾರಣರಾಗಿದ್ದಾರೆ. ಇದನ್ನೂ ಓದಿ : ರಾಜ್ಯ ಕಂಡ ಶ್ರೇಷ್ಟ ರಾಜಕಾರಣಿಯಾದ ಎಸ್​.ಎಂ ಕೃಷ್ಣರ ಜೀವನಗಾಥೆ !

ಅಂದು ಎಸ್ಎಂ ಕೃಷ್ಣ ತೆಗೆದುಕೊಂಡ ಕೆಲ ನಿರ್ಧಾರಗಳಿಂದಾಗಿ ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲಾ ಭಾಗದ ಜನರು ವಾಸವಾಗಿದ್ದಾರೆ. ಕೆಲಸ ಅರಸಿ ಬಂದ ಎಷ್ಟೋ ಜನರು ಇಂದು ಬೆಂಗಳೂರಿನಲ್ಲಿ ಉಳಿಯಲು ಎಸ್ಎಂ ಕೃಷ್ಣ ಕಾರಣರಾಗಿದ್ದಾರೆ. ಹಾಗಾಗಿ ಇಂದು ಬೆಂಗಳೂರಿನಲ್ಲಿ ಎಲ್ಲಾ ಸಮುದಾಯದ ಜನರು ನೆಲೆಯೂರಿದ್ದು, ಸಾಂಸ್ಕೃತಿಕವಾಗಿಯೂ ರಾಜಧಾನಿ ಶ್ರೀಮಂತವಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಎಲ್ಲಾ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

RELATED ARTICLES

Related Articles

TRENDING ARTICLES