Wednesday, January 22, 2025

ಬರ್ಬರವಾಗಿ ತಮ್ಮನ ಕೊಂದು ಶವದ ಮುಂದೆಯೆ ಬೀಡಿ ಸೇದುತ್ತಾ ಕುಳಿತ ಅಣ್ಣ !

ಉತ್ತರ ಕನ್ನಡ : ಕ್ಷುಲ್ಲಕ ಕಾರಣಕ್ಕೆ ಅಣ್ಣನೇ ತನ್ನ ಸ್ವಂತ ತಮ್ಮನ ಕೊಲೆ ಮಾಡಿದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದ್ದು. ಕೊಲೆ ಮಾಡಿದ ನಂತರ ಆರೋಪಿ ಹೆಣದ ಮುಂದೆಯೆ ಕೂತು ಬೀಡಿ ಸೇದಿದ್ದಾನೆ. ಹೊನ್ನಾವರ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.

ಕುಡಿದ ಮತ್ತಿನಲ್ಲಿ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆಬ್ಬೈಲ್ ಗ್ರಾಮದಲ್ಲಿ ನಡೆದಿದೆ. ಅಣ್ಣ ಸುಬ್ರಾಯ್ ನಾಯ್ಕ್​ನಿಂದ ನಾಗೇಶ್ ನಾಯ್ಕ್(50) ಕೊಲೆ ಮಾಡಲಾಗಿದೆ. ಕೌಟುಂಬಿಕ ಕಲಹ ಸಾವಿನಲ್ಲಿ ಅಂತ್ಯವಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಕೊಲೆ ಮಾಡಿ ಹೆಣದ ಮುಂದೆ ಅಣ್ಣ ಬೀಡಿ ಸೇದುತ್ತಾ ಕೂತ್ತಿದ್ದರು. ಈ ಹಿಂದೆ ಅಣ್ಣನ ಮೇಲೆ ತಮ್ಮ ನಾಗೇಶ್ ನಾಯ್ಕ್ ಹಲ್ಲೆ ಮಾಡಿದ್ದ.

 

RELATED ARTICLES

Related Articles

TRENDING ARTICLES