ಬೆಂಗಳೂರು : ಲಾ-ನಿನಾ ಎಫೆಕ್ಟ್ ಕಾರಣದಿಂದಾಗಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದರ ಪರಿಣಾಮವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಮಾಹಿತಿ ದೊರೆತಿದೆ. ವಾತವರಣದಲ್ಲಿ ಆದ ಬದಲಾವಣೆಯಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು. ಆಸ್ಪತ್ರೆಗಳ ಶೇಕಡಾ 20% OPDಗಳು ಫುಲ್ ಆಗಿವೆ ಎಂದು ತಿಳಿದುಬಂದಿದೆ.
ವೈರಲ್ ಇನ್ಫೆಕ್ಷನ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸಲು ವೈದ್ಯರು ಸೂಚನೆ ನೀಡಿದ್ದು.ಮಕ್ಕಳಿಗೆ ಮಾಸ್ಕ್ ಹಾಕಿ ಶಾಲೆಗೆ ಕಳುಹಿಸಲು ಸಲಹೆ ನೀಡುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ. ಸಣ್ಣ ಧೂಳಿನಿಂದಲೂ ಗಂಟಲಿನ ನೋವು, ಶೀತ, ಜ್ವರ ಬಾಧಿಸುವ ಸಾಧ್ಯತೆ ಹೆಚ್ಚಾಗುತ್ತಿದ್ದು.
ಹೀಗಾಗಿ ಎಚ್ಚರ ವಹಿಸಲು ಸಲಹೆ ನೀಡಿದ್ದಾರೆ.
ಈ ಸಮಯದಲ್ಲಿ ಮಕ್ಕಳಿಗೆ ಇಮ್ಯುನಿಟಿ ಪವರ್ ಕಡಿಮೆಯಾಗುವುದರಿಂದ ಯಾವುದೇ ರೀತಿಯ ಜಂಕ್ಪುಡ್ಗಳನ್ನು ನೀಡದಂತೆ ಸಲಹೆ ನೀಡಿರುವ ವೈದ್ಯರು. ಹೆಚ್ಚು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.