Friday, January 10, 2025

ಸಚಿವ ಸ್ಥಾನ ಕೊಡ್ತೀವಿ ಅಂತ ಸಿಎಂ, ಡಿಸಿಎಂ ಹೇಳಿದ್ದಾರೆ : ಹೆಚ್.ಸಿ ಬಾಲಕೃಷ್ಣ

ರಾಮನಗರ: ಜನ ಚನ್ನಪಟ್ಟಣ ಗೆಲ್ಲಿಸಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಗುರುವಾರ ಹೇಳಿದರು.

ಬೈ ಎಲೆಕ್ಷನ್​ನಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಭರ್ಜರಿ ಜಯಭೇರಿಯಾಗಿರುವ ಬಗ್ಗೆ ರಾಮನಗರದಲ್ಲಿ ಮಾತಾಡಿದ ಅವರು, ಜನ ಚನ್ನಪಟ್ಟಣ ಗೆಲ್ಲಿಸಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಸಿಎಂ, ಡಿಸಿಎಂ ಹಾಗೂ ಸರ್ಕಾರದ ಕೆಲಸಕ್ಕೆ ಮನ್ನಣೆ ನೀಡಿದ್ದಾರೆ. ಉತ್ತಮ ಕೆಲಸ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳುತ್ತೇವೆ ಎಂದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಕೊಡ್ತೀವಿ ಅಂತ ಸಿಎಂ, ಡಿಸಿಎಂ ಹೇಳವ್ರೆ. ಆದರೆ, ನೋಡೊಣ ಆ ಟೈಂಗೆ ಏನೇನು ಆಗುತ್ತೋ? ನಮ್ಮ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತೋ ಗೊತ್ತಿಲ್ಲ. ಪೊಲೀಸ್ ಆಗಿದ್ದರೆ ಪ್ರಮೋಶನ್ ಆಗಿ ಡಿವೈಎಸ್ಪಿ ಆಗ್ತಿದ್ದರು. ಆದರೆ, ನಮಗೆ ಯಾವುದೇ ಪ್ರಮೋಷನ್ ಸಿಕ್ಕಿಲ್ಲ, ಎಲ್ಲಿದ್ದೆವೋ ಅಲ್ಲೇ ಇದ್ದೀವಿ‌. ಸಚಿವ ಸ್ಥಾನ ನಾವು ಒತ್ತಾಯ ಮಾಡುವುದಲ್ಲ, ಅದು ಆಗಲೇಬೇಕು. ನಾವು ಲಾಬಿ ಮಾಡುವುದಿಲ್ಲ ಎಂದು ಹೇಳಿದರು.

ಅದುವಲ್ಲದೇ, ಸೀನಿಯರ್ ಇದ್ದಾರೆ, ಯಾರ ಶಕ್ತಿ ಏನು, ಉಪಚುನಾವಣೆಯಲ್ಲಿ ಮಾಡಿರೋ ಕೆಲಸ ಎಲ್ಲವನ್ನೂ ಹೈಕಮಾಂಡ್ ನೋಡಿದೆ. ಸಿ.ಪಿ.ಯೋಗೇಶ್ವರ್ ಆಕಾಂಕ್ಷಿ ಆಗಿದ್ದರೆ ಇರಲಿ. ಅವರಿಗೂ ಆಸೆಯಿದೆ, ನನಗೂ ಆಸೆಯಿದೆ. ಆದರೆ, ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಕಾಂಗ್ರೆಸ್​ ಶಾಸಕ ಹೆಚ್.ಸಿ ಬಾಲಕೃಷ್ಣ ಮಾತಾಡಿದರು.

RELATED ARTICLES

Related Articles

TRENDING ARTICLES