Friday, January 10, 2025

13 ಲಕ್ಷಕ್ಕೆ ಮಾರಾಟವಾದ ಹಳ್ಳಿಕಾರ್ ಎತ್ತು!

ಮಂಡ್ಯ: ಹಳ್ಳಿಕಾರ್​ ತಳಿಯ ಎತ್ತು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು. ಬರೋಬ್ಬರು 13.05 ಲಕ್ಷ ಮೊತ್ತಕ್ಕೆ ಮಾರಾಟವಾಗಿದೆ ಎಂದು ಮಾಹಿತಿ ದೊರೆತಿದೆ. ಕಾಂತರಾಜು ಎಂಬುವವರು ಸಾಕಿದ್ದ ಹಳ್ಳಿಕಾರ್​ ಎತ್ತು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಶಾಲಿಯಾದ ಇತಿಹಾಸ ಹೊಂದಿದೆ.

ಮಂಡ್ಯ ನಗರದ ತಾವರೆಗೆರೆಯ A1 ಟೈಗರ್ ಎಂದೇ ಖ್ಯಾತಿಪಡೆದಿರುವ ಹಳ್ಳಿಕಾರ್ ಎತ್ತು ಮಾರಾಟವಾಗಿದ್ದು. ಈ ಎತ್ತನ್ನು ಮಂಡ್ಯದ ತಾವರಗೆರೆಯ ಕಾಂತರಾಜು ಎಂಬುವವರು ಸಾಕಿದ್ದರು ಎಂದು ತಿಳಿದು ಬಂದಿದೆ. ಈ ಎತ್ತು ಹಲವಾರು ಎತ್ತಿನ ಗಾಡಿ ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದು. ಸುಮಾರು ಒಂದು ಬೈಕ್​ ಸೇರಿದಂತೆ 26 ಬಹುಮಾನಗಳನ್ನು ಗೆದ್ದುಕೊಂಡಿದೆ ಎಂದು ಮಾಹಿತಿ ದೊರೆತಿದೆ.

ಈ ಎತ್ತನ್ನು ತಮಿಳುನಾಡು ಮೂಲದ ಎಸ್.ವಿ.ರಾಜನ್ ಎಂಬುವವರು ಬರೋಬ್ಬರಿ 13.05 ಲಕ್ಷ ರೂಪಾಯಿ ಹಣವನ್ನು ಕೊಟ್ಟು ಖರೀದಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES