Saturday, January 11, 2025

ಸಂವಿಧಾನ ಬದಲಿಸಲು ಯಾರಿಂದಲು ಸಾಧ್ಯವಿಲ್ಲ :ಸ್ಪೀಕರ್​ ಓಂ ಬಿರ್ಲಾ

ದೆಹಲಿ : ಸಂಸತ್​ ಚಳಿಗಾಲದ ಅಧಿವೇಶನ ಇಂದಿನಿಂದ( ನ. 25) ಆರಂಭವಾಗಿದ್ದು. ಮೊದಲಿಗೆ ಸಂಸತ್​ ಅನ್ನು ಉದ್ದೇಶಿಸಿ ಸ್ಪೀಕರ್​ ಓಂ ಬಿರ್ಲಾ ಮಾತನಾಡಿದರು. ಈ ವೇಳೆ ರಾಹುಲ್​ ಹೇಳಿಕೆಗೆ ತಿರುಗೇಟು ನೀಡಿದ್ದು. ‘ಜನರ ಹಕ್ಕುಗಳನ್ನು ರಕ್ಷಿಸಲು ಇರುವ ಸಂವಿಧಾನವನ್ನು ಬದಲಿಸಲು ಯಾವ ಸರ್ಕಾರದಿಂದಲು ಸಾಧ್ಯವಿಲ್ಲ’ ಎಂದು ಹೇಳಿದರು.

ಬಿಜೆಪಿ  ಸರ್ಕಾರ ಸಂವಿಧಾನವನ್ನು ಬದಲಾಯಿಸುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಒಂ ಬಿರ್ಲಾ ಸ್ಪಷ್ಟನೆ ನೀಡಿದ್ದು ‘ ಜನರ ಹಕ್ಕುಗಳು ಮತ್ತು ಪಾರದರ್ಶಕತೆಗಾಗಿ ಸಂವಿಧಾನದಲ್ಲಿ ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಅದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಯಾವುದೇ ಸರ್ಕಾರ ಸಂವಿಧಾನದ ಮೂಲ ಮನೋಭಾವವನ್ನು ಹಾಳು ಮಾಡಿಲ್ಲ. ಹಾಗಾಗಿ, ದೇಶದಲ್ಲಿ ಯಾವುದೇ ಪಕ್ಷದ ಸರ್ಕಾರವು ಸಂವಿಧಾನದ ಮೂಲ ಮನೋಭಾವವನ್ನು ಎಂದಿಗೂ ಹಾಳುಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸ್ಪೀಕರ್​ ಓಂ ಬಿರ್ಲಾ ‘ಸಮಾಜದ ವಂಚಿತ, ಬಡ, ಹಿಂದುಳಿದ ಜನರಿಗೆ ಇನ್ನೂ ಸಾಮಾಜಿಕ ಮೀಸಲಾತಿಯ ಅಗತ್ಯವಿದೆ. ಆದ್ದರಿಂದ ಅವರ ಜೀವನದಲ್ಲಿ ಸಮೃದ್ಧಿಯಾಗಲು, ಸಾಮಾಜಿಕ ಬದಲಾವಣೆಯಾಗಲು ಮೂಲ ತತ್ವವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಾರ್ಯನಿರ್ವಹಿಸುತ್ತದೆ.

ಅಂಬೇಡ್ಕರ್ ಸಂವಿಧಾನದ ಮೇಲೆ ನಂಬಿಕೆ ಹೊಂದಿರುವ ಜನರು ಸಂವಿಧಾನದ ಮೇಲೆ  ಅವಲಂಬಿತರಾಗಿದ್ದಾರೆ.   ಆದ್ದರಿಂದ ಸಂಸತ್ತಿನಲ್ಲಿ ನಮ್ಮ ನಡವಳಿಕೆ ಮತ್ತು ಚಿಂತನೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸದನದ ಘನತೆ ಕಾಪಾಡಿಕೊಳ್ಳಲು ಸದಸ್ಯರ ನಡವಳಿಕೆ ಬಹಳ ಮುಖ್ಯ ಆದ್ದರಿಂದ ಸದನದ ಸದಸ್ಯರು ಇದರ ಮೇಲೆ ಗಮನ ಇಡಬೇಕು’ ಎಂದು ಹೇಳಿದರು.

RELATED ARTICLES

Related Articles

TRENDING ARTICLES