Saturday, January 11, 2025

2028ಕ್ಕೆ ಕಾಂಗ್ರೆಸ್​​ ಪಕ್ಷವನ್ನು ಸೋಲಿಸುತ್ತೇನೆ ಎಂದು ತೊಡೆ ತಟ್ಟಿದ ಬಂಗಾರು ಹನುಮಂತು

ಬಳ್ಳಾರಿ : ಸಂಡೂರು ಉಪಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು. ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸೋಲಿನ ಕುರಿತು ಬಿಜೆಪಿಯ ಬಂಗಾರು ಹನುಮಂತು ಹೇಳಿಕೆ ನೀಡಿದ್ದು. 2028ಕ್ಕೆ ಕಾಂಗ್ರೆಸ್​ ಪಕ್ಷವನ್ನು ಸೋಲಿಸುವುದೆ ನನ್ನ ಗುರಿ ಎಂದು ತೊಡೆ ತಟ್ಟಿದ್ದಾರೆ.

ಸಂಡೂರು ಬಿಜೆಪಿ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೇಳಿಕೆ ನೀಡಿದ್ದು. ‘ಈ ಚುನಾವಣೆಯಲ್ಲಿ ಕಾಂಗ್ರೇಸ್ ಹಣದ ಹೊಳೆ ಹರಿಸಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಎರಡು ಪಕ್ಷಗಳ ಮಧ್ಯೆ ಟಫ್​ಫೈಟ್​ ಇತ್ತು. ಇಲ್ಲಿ ಕಾಂಗ್ರೆಸ್​ ಹಣ ಹಂಚದೆ ವಿಜಯ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಹಣ ಹಂಚಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಆದರೆ 2028 ಕ್ಕೆ ಕಾಂಗ್ರೇಸ್ ಪಕ್ಷವನ್ನು ಸೋಲಿಸುವುದೆ ನನ್ನ ಗುರಿ, ಇದು ನಾನು ಮಾಡಿತ್ತಿರುವ ಶಪಥ’ ಎಂದು 2028 ರ ಚುನಾವಣೆಯಲ್ಲಿ ನಾನೇ ಸ್ಫರ್ಧೆ ಮಾಡಿ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

RELATED ARTICLES

Related Articles

TRENDING ARTICLES