Saturday, January 11, 2025

ಭಾರತ-ಅಮೆರಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತಾ ಗೌತಮ್ ಅದಾನಿ ಲಂಚ ಪ್ರಕರಣ ?

ನ್ಯೂಯಾರ್ಕ್​ : ಗೌತಮ್ ಅದಾನಿ ಲಂಚ ಹಗರಣದ ಬಗ್ಗೆ ಅಮೆರಿಕದ ಅಭಿಪ್ರಾಯವೇನು? ಎಂಬ ಪ್ರಶ್ನೆ ಮೂಡೋದು ಸಹಜ. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಸ್ವತಃ ಅಮೆರಿಕಾದ ಶ್ವೇತಭವನವೇ ಪ್ರತಿಕ್ರಿಯೆ ನೀಡಿದೆ.

ಭಾರತದ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಮೇಲೆ ಲಂಚ ಹಗರಣದ ಆರೋಪ ಕೇಳಿ ಬಂದಿದೆ. ಗೌತಮ್ ಅದಾನಿ ಅಮೆರಿಕದಲ್ಲಿ ಲಂಚ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅದಾನಿ ಮೇಲಿನ ಅಮೆರಿಕದ ಗಂಭೀರ ಆರೋಪ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಅದಾನಿ ಸಮೂಹದ ಮೇಲೆ ಕೇಳಿ ಬಂದಿರುವ ಲಂಚ ಆರೋಪ ಸಹಿತ ವಿವಿಧ ಪ್ರಕರಣಗಳು ಈಗ ತನಿಖೆ ಹಂತದಲ್ಲಿದೆ.

ಈಗ ಸದ್ಯದ ಪ್ರಶ್ನೆ ಏನೆಂದರೆ, ಅದಾನಿ ಲಂಚ ಹಗರಣ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು. ಅಷ್ಟಕ್ಕೂ ಗೌತಮ್ ಅದಾನಿ ಲಂಚ ಹಗರಣದ ಬಗ್ಗೆ ಅಮೆರಿಕದ ಅಭಿಪ್ರಾಯವೇನು? ಎಂಬ ಪ್ರಶ್ನೆ ಮೂಡೋದು ಸಹಜ.

ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಸ್ವತಃ ಅಮೆರಿಕಾದ ಶ್ವೇತಭವನವೇ ಪ್ರತಿಕ್ರಿಯೆ ನೀಡಿದೆ. ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ತನಗೆ ತಿಳಿದಿದೆ ಎಂದು ಶ್ವೇತಭವನ ಹೇಳಿದ್ದು, ಇತರ ಸಮಸ್ಯೆಗಳಂತೆ ಭಾರತ ಮತ್ತು ಅಮೆರಿಕ ಈ ವಿಷಯವನ್ನು ಸಹ ಪರಿಹರಿಸುತ್ತವೆ ಎಂದು ಹೇಳಿದೆ.

RELATED ARTICLES

Related Articles

TRENDING ARTICLES