Wednesday, January 22, 2025

ಕತ್ತೆ ಮೇಲೆ ಸೈನಿಕರ ಮೃತದೇಹ ಹೊತ್ತೊಯ್ದ ಪಾಕ್​ ಸೇನೆ

ಕರಾಚಿ: ಪಾಕಿಸ್ತಾನದಲ್ಲಿ ಬಲೂಚಿಸ್ಥಾನ ಉಗ್ರರು ಮತ್ತು ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹಲವು ಪಾಕ್​ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಉಗ್ರರು ಇರಿಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದ ಮಡಿದ ಯೋಧರ ಶವಗಳನ್ನು ಪಾಕ್ ಸೇನೆ​​ ಕತ್ತೆಯ ಮೇಲೆ ಹೊರಿಸಿಕೊಂಡು ಹೋಗಲಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಶಹಬಾಜ್ ಷರೀಫ್​ ನೇತೃತ್ವದ ಪಾಕ್ ಸರ್ಕಾರವು ಸತ್ತ ಪಾಕಿಸ್ತಾನಿ ಸೈನಿಕರನ್ನು ಕತ್ತೆಗಳ ಮೇಲೆ ಹೊತ್ತೊಯ್ಯುತ್ತಿದೆ. ಇದರ ವಿಡಿಯೋಗಳು ಸೋಷಿಯಲ್​ ಮಿಡೀಯಾದಲ್ಲಿ ಭಾರೀ ವೈರಲ್ ಆಗಿದ್ದು.ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವಿಡಿಯೋ ಹೊರಬಿದ್ದ ನಂತರ ಪಾಕ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಪರ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಅಲ್ಲಿನ ಸರ್ಕಾರ ತೋರುತ್ತಿರುವ ಅಗೌರವದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಪಾಕ್​​ನಲ್ಲಿ ಬಲೂಚ್​​ ಉಗ್ರರು ಮತ್ತು ಪಾಕ್​ ಸೇನೆಯ ನಡುವೆ ನಿರಂತರವಾಗಿ ಸಂಘರ್ಷವಾಗುತ್ತಿದ್ದು. ಉಗ್ರದಾಳಿಯಲ್ಲಿ ಅನೇಕ್​ ಪಾಕ್​ ಸೈನಿಕರು ಸೇರಿದಂತೆ. ನಾಗರಿಕರು ಬಲಿಯಾಗುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES