ಆನೇಕಲ್ : ಅನೈತಿಕ ಸಂಬಂಧ ಹಿನ್ನಲೆ ವಕೀಲರೊಬ್ಬರನ್ನು ಕೋರ್ಟ್ ಆವರಣದಲ್ಲಿಯೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಆನೇಕಲ್ನ ಹೊಸೂರಿನಲ್ಲಿ ನಡೆದಿದ್ದು. ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮಾಹಿತಿನ ದೊರೆತಿದೆ.
ಆನೇಕಲ್ ಗಡಿ, ಹೊಸೂರಿನಲ್ಲಿ ಘಟನೆ ನಡೆದಿದ್ದು. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ. ವಕೀಲ ಕಣ್ಣನ್ ಇಂದು ಕೋರ್ಟ್ ಆವರಣಕ್ಕೆ ಬಂದಿದ್ದರು. ಅಲ್ಲಿಗೆ ಬಂದ ಆನಂದ್ ಎಂಬಾತ ಮಚ್ಚಿನಿಂದ ವಕೀಲ ಕಣ್ಣನ್ ತಲೆಗೆ ಹೊಡೆದಿದ್ದಾನೆ. ತಲೆಗೆ ಹೊಡೆಯುತ್ತಿದ್ದಂತ ಕೆಳಗೆ ಬಿದ್ದ ವಕೀಲನ ಮೇಲೆ ಮತ್ತೆ ಮಚ್ಚಿನಿಂದ ಮನಸೋ ಇಚ್ಚೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ವಕೀಲನನ್ನು ಆಸ್ಪತ್ರೆಗೆ ಕೊಂಡೊಯ್ಯದಿದ್ದು. ಮಾರ್ಗಮದ್ಯದಲ್ಲಿ ವಕೀಲ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ದೊರೆತಿದೆ. ಕೊಲೆ ನಡೆದ ಸ್ಥಳಕ್ಕೆ ಹೊಸೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.