Thursday, December 26, 2024

ಇವಿ ಶೋರೂಂನಲ್ಲಿ ಅಗ್ನಿ ದುರಂತ : ಶೋರೂಂ ಮಾಲೀಕನಿಗೆ ಜಾಮೀನು

ಬೆಂಗಳೂರು : ನಗರದ ರಾಜ್​ಕುಮಾರ್​ ರಸ್ತೆಯಲ್ಲಿನ ಎಲೆಕ್ಟ್ರಿಕ್​​ ಶೋರೂಂಗೆ ಬೆಂಕಿಬಿದ್ದು ಯುವತಿ ಸಜೀವ ದಹನವಾದ ಪ್ರಕರಣದಲ್ಲಿ ಶೋರೂಂ ಮಾಲೀಕನಿಗೆ ಮತ್ತು ಮ್ಯಾನೇಜರ್​ಗೆ ಜಾಮೀನು ದೊರೆತಿದೆ ಎಂದು ಮಾಹಿತಿ ದೊರೆತಿದೆ.

ನೆನ್ನೆ (ನ.19) ಸಂಜೆ ರಾಜಾಜಿನಗರದ ರಾಜ್​ಕುಮಾರ್​ ರಸ್ತೆಯಲ್ಲಿನ ev ಶೋರೂಂಗೆ ಬೆಂಕಿ ಬಿದ್ದು ಯುವತಿಯೊಬ್ಬಳು ಸಜೀವ ದಹನವಾಗಿದ್ದಳು. ಈ ಪ್ರಕರಣದಲ್ಲಿ ಶೋರೂಂ ಮಾಲೀಕ ಪುನೀತ್​ ಮತ್ತು ಮ್ಯಾನೇಜರ್​​​ ಯುವರಾಜ್​ ಎಂಬುವವರನ್ನು ಬಂಧಿಸಲಾಗಿತ್ತು. ಮೃತ ಯುವತಿ ಪ್ರಿಯಾ ಕುಟುಂಬಸ್ಥರಿಂದ ದೂರು ಕೊಟ್ಟ ಹಿನ್ನಲೆ ಇವರನ್ನು ಬಂದಿಸಲಾಗಿತ್ತು.

ರಾಜಾಜಿನಗರ ಪೊಲೀಸರಿಂದ ಇಂದು ಇಬ್ಬರನ್ನು ಬಂಧನ ಮಾಡಲಾಗಿತ್ತು ಮತ್ತು ಇವರ ಇಬ್ಬರ ವಿರುದ್ದ ಎಫ್​ಐಆರ್​ ದಾಖಲಿಸಿ ಇವರನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು. 32ನೇ ಎಸಿಎಂಎಂ ಕೋರ್ಟ್​ನಲ್ಲಿ ಆರೋಪಿಗಳ ವಿಚಾರಣೆ ಮಾಡಿದ ನ್ಯಾಯಾಲಯ ಆರೋಪಿಗಳಿಗೆ  ಷರತ್ತುಬದ್ದ ಜಾಮೀನು ನೀಡಿ ಆರೋಪಿಗಳನ್ನು ಬಂಧ ಮುಕ್ತ ಮಾಡಿದೆ.

RELATED ARTICLES

Related Articles

TRENDING ARTICLES