Wednesday, January 22, 2025

ವಂದೇ ಭಾರತ್​​ ರೈಲಿನ ಊಟದಲ್ಲಿ ಹುಳ ಪತ್ತೆ

ಚನೈ:  ತಮಿಳುನಾಡಿನ ತಿರುನಲ್ವೇಲಿ ಜಂಕ್ಷನ್‌ನಿಂದ ಚೆನ್ನೈ ಎಗ್ಮೋರ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ರೈಲಿನಲ್ಲಿ ಬಡಿಸಿದ ಸಾಂಬಾರ್‌ನಲ್ಲಿ ಕೀಟಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾನೆ.

ದೇಶದ ಪ್ರತಿಷ್ಠಿತ ರೈಲು ಸೇವೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಊಟದಲ್ಲಿ ಹುಳು ಪತ್ತೆಯಾದ ಹಿನ್ನಲೆಯಲ್ಲಿ ರೈಲ್ವೇ ಇಲಾಖೆ ಕೇಟರಿಂಗ್ ಸಿಬ್ಬಂದಿಗೆ ಬರೊಬ್ಬರಿ 50 ಸಾವಿರ ರೂ ದಂಡ ವಿಧಿಸಿದೆ.

ಹೌದು.. ತಮಿಳುನಾಡಿನ ತಿರುನಲ್ವೇಲಿ ಜಂಕ್ಷನ್‌ನಿಂದ ಚೆನ್ನೈ ಎಗ್ಮೋರ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ರೈಲಿನಲ್ಲಿ ಬಡಿಸಿದ ಸಾಂಬಾರ್‌ನಲ್ಲಿ ಕೀಟಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾನೆ. ಕೂಡಲೇ ಆತ ಐಆರ್‌ಸಿಟಿಸಿಗೆ ದೂರು ಸಲ್ಲಿಸಿದ್ದು ಮಾತ್ರವಲ್ಲದೆ ಕಲುಷಿತ ಆಹಾರದ ದೃಶ್ಯಗಳನ್ನು ಫೋಟೋ ತೆಗೆದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES