Wednesday, January 22, 2025

ಕ್ಷುಲ್ಲಕ ವಿಚಾರಕ್ಕೆ ಗೃಹಿಣಿ ಆತ್ಮಹ*ತ್ಯೆ

ಮೈಸೂರು(ನ.17) :ಗಂಡ ಹೆಂಡತಿಯ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಗೃಹಿಣಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೋಮಲ(25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ತಿಳಿದುಬಂದಿದೆ.

ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಒಂದು ಕಾಲದಲ್ಲಿ ಜನಜನಿತವಾಗಿತ್ತು. ಆಂದರೆ ಗಂಡ ಹೆಂಡತಿ ಎಷ್ಟೆ ಜಗಳವಾಡಿದರು ಬೆಳಿಗ್ಗೆ ಏಳುವ ವೇಳೆಗೆ ಅವರು ತಮ್ಮ ಎಲ್ಲಾ ಜಗಳವನ್ನು ಮರೆತು ಒಂದಾಗುತ್ತಿದ್ದರು.  ಆದರೆ ಕಾಲ ಬದಲಾಗುತ್ತಿದ್ದಂತೆ ಯುವ ಜನರ ಮನಸ್ಥಿತಿಯು ಬದಲಾಗುತ್ತಿದ್ದು ಮೈಸೂರಿನಲ್ಲಿ ಗೃಹಿಣಿಯೊಬ್ಬಳು ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕೋಮಲ ಹಾಗೂ ರಾಜು ಮೈಸೂರಿನ ಹಳೆ ಕೆಸರೆಯಲ್ಲಿ ವಾಸವಾಗಿದ್ದರು. ಆದರೆ ನೆನ್ನೆ ತಡರಾತ್ರಿ ಗಂಡ ಮತ್ತು ಹೆಂಡತಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು. ಜಗಳದಿಂದ ಬೇಸತ್ತ ಗೃಹಿಣಿ ಕೋಮಲಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ NR ಪೊಲೀಸ್ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES