Monday, January 13, 2025

ಬಾಯಿ ಕ್ಯಾನ್ಸರ್​​ಗೆ ಅಡಿಕೆ ಕಾರಣ: WHO ವರದಿಯಿಂದ ಕಂಗಾಲಾದ ಅಡಿಕೆ ಬೆಳೆಗಾರರು

ಮಂಗಳೂರು (ನ.17) : ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ದಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ(WHO) ಅಂಗಸಂಸ್ಥೆಯೊಂದು ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿಯು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ತಂಬಾಕು ಮಾದರಿಯಲ್ಲೇ ಅಡಕೆ ಬೆಳೆ ನಿಯಂತ್ರಣ ಉಪಕ್ರಮಗಳಿಗೂ ಕಾರಣವಾಗುವ ಆತಂಕ ಬೆಳೆಗಾರರಲ್ಲಿ ಮೂಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಂಗಸಂಸ್ಥೆ ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆ್ಯಂಡ್‌ ಕ್ಯಾನ್ಸರ್‌ (IARC) 2024 ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಮತ್ತೆ ಅಡಕೆಯನ್ನು ಕ್ಯಾನ್ಸರ್‌ ಕಾರಕ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್‌ ಅಂಕಾಲಜಿ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಐಎಆರ್‌ಸಿ ಸಂಸ್ಥೆ ಬಾಯಿ ಕ್ಯಾನ್ಸರ್‌ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕ್ಯಾನ್ಸರ್‌ ವರದಿ ಪ್ರಕಟಿಸುತ್ತದೆ. ಈ ಹಿಂದಿನ ಐಎಆರ್‌ಸಿಯ ವರದಿಗಳಲ್ಲೂ ಅಡಕೆ ಕ್ಯಾನ್ಸರ್‌ಕಾರಕ ಎಂದೇ ಉಲ್ಲೇಖವಾಗಿದ್ದರೂ ಈಗಿನ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.

ಅಡಕೆ ಬೆಳೆ ಮೇಲೆ ಪರಿಣಾಮ:

ಅಡಕೆ ಕ್ಯಾನ್ಸರ್‌ಕಾರಕ ಎಂಬ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. 1998 ರಿಂದಲೂ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಅಡಕೆ ಹಾನಿಕಾರಕ ಎಂದೇ ಉಲ್ಲೇಖಿಸಲಾಗುತ್ತಿದೆ. ಅಡಕೆ ಆರೋಗ್ಯದಾಯಕ, ಸಾಂಪ್ರದಾಯಿಕವಾಗಿಯೂ ಅಡಕೆ ಬಳಸುತ್ತಾರೆ. ಮೌಲ್ಯವರ್ಧಿತ ಉತ್ಪನ್ನವಾಗಿಯೂ ಉಪಯೋಗಿಸುತ್ತಾರೆ ಎಂಬುದನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ. ಇದರ ಜತೆಗೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಮಾರುಕಟ್ಟೆ ಅಧ್ಯಯನ ವರದಿಗಳೂ ಅಭಿಪ್ರಾಯ ಮಂಡಿಸಿದ್ದರೂ ಅದು ಐಎಆರ್‌ಸಿ ತಲುಪಿಲ್ಲ. ಹೀಗಾಗಿ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇರುವುದು ಈಗ ಅಡಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES