Monday, December 23, 2024

ದೆಹಲಿಯ ಸಾರಿಗೆ ಮತ್ತು ಪರಿಸರ ಸಚಿವ ಕೈಲಾಶ್ ಗೆಹ್ಲೋಟ್ ರಾಜೀನಾಮೆ

ದೆಹಲಿ:  ದಿಢೀ‌ರ್ ಬೆಳವಣಿಗೆಯಲ್ಲಿ ದೆಹಲಿಯ ಸಾರಿಗೆ ಮತ್ತು ಪರಿಸರ ಸಚಿವ ಕೈಲಾಶ್ ಗೆಹ್ಲೋಟ್​ ಅವರು ಇಂದು ಆಮ್ ಆದ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ, ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರವಾಲ್ ಅವರಿಗೂ ಪತ್ರ ಬರೆದಿದ್ದಾರೆ.

ಕೇಜ್ರಿವಾಲ್​ಗೆ ಬರೆದಿರುವ ಪತ್ರದಲ್ಲಿ ‘ದೆಹಲಿ ಸರ್ಕಾರವು ಕೇಂದ್ರದೊಂದಿಗೆ ಹೋರಾಟ ನಡೆಸುವುದರಲ್ಲೇ ಬಹುಪಾಲು ಸಮಯವನ್ನು ಕಳೆದರೆ ದೆಹಲಿಯ ನಿಜವಾದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಎಎಪಿ ಪಕ್ಷದಿಂದ ಹೊರಬರುವುದನ್ನು ಬಿಟ್ಟು ನನಗೆ ಬೇರೆ ಯಾವುದೇ ಆಯ್ಕೆಯಿಲ್ಲ. ಆದ್ದರಿಂದ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಗೆಹ್ಲೋಟ್​ ತಿಳಿಸಿದ್ದಾರೆ.

‘ನಾವು ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ನಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಮಾತ್ರ ಹೋರಾಡುತ್ತಿದ್ದೇವೆ. ಇದು ದೆಹಲಿಯ ಜನರಿಗೆ ಮೂಲಭೂತ ಸೇವೆಗಳನ್ನು ತಲುಪಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಿದೆ’ ಎಂದು ಗೆಹ್ಲೋಟ್​​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES