Wednesday, January 22, 2025

ಬಿಜೆಪಿಯಲ್ಲಿ ಮೂಲೆಗುಂಪಾದರ ಪ್ರತಾಪ್​ ಸಿಂಹ ?

ಬೆಂಗಳೂರು :  ಮಾಜಿ ಸಂಸದ ಪ್ರತಾಪ್ ಸಿಂಹಗೆ ವಿಜಯೇಂದ್ರ‌ ಟಕ್ಕರ್ ನೀಡಿದ್ದು. ವಕ್ಫ್​ ವಿಚಾರವಾಗಿ ಬಿಜೆಪಿ ಆರಂಭಿಸಿರುವ ರಾಜ್ಯ ಪ್ರವಾಸಕ್ಕೆ ಮಾಜಿ ಸಂಸದ ಪ್ರತಾಪ್​ಸಿಂಹಗೆ ಅವಕಾಶ ನೀಡದೆ ಇರುವುದು ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳಕ್ಕೆ ಕನ್ನಡಿ ಇಡಿದಂತಾಗಿದೆ.

ವಿಜಯೇಂದ್ರ ನಾಯಕತ್ವದ ವಿರುದ್ಧ ಸಿಡಿದೆದಿದ್ದ ಪ್ರತಾಪ್​​ ಸಿಂಹಗೆ ಸಂಘಟನೆಯಲ್ಲಿ ಅವಕಾಶ ನೀಡದೆ ತಂಡದಿಂದ ಹೊರಗೆ ಇಟ್ಟಿದ್ದಾರೆ. ಇತರೆ ರೆಬಲ್ಸ್​​ ಟೀಮ್​​ನ ಸದಸ್ಯರಿಗೆ ಅವಕಾಶ ನೀಡಿದ್ದು. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿಗೆ ಮಾತ್ರ ಸ್ಥಾನ ನೀಡಿದ್ದು. ಉಳಿದಂತೆ ಅವರ ಟೀಮ್ ನಲ್ಲಿದ್ದ ಪ್ರತಾಪ್ ಸಿಂಹಗೆ ಅವಕಾಶ ನೀಡದೆ ಹೊರಗೆ ಉಳಿಸಿದ್ದಾರೆ.

ಕಳೆದ ಆರ್​ಎಸ್​​ಎಸ್ ನಾಯಕರ ಸಭೆಯಲ್ಲಿ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದನ ಪ್ರತಾಪ್​ ಸಿಂಹ. ತಮಗೆ ಮೈಸೂರು ಸಂಸದ ಸ್ಥಾನದ ಟಿಕೆಟ್​ ಕೈತಪ್ಪಲು ವಿಜಯೇಂದ್ರ ಕಾರಣ ಎಂದು ಆಂತರಿಕವಾಗಿ ಸಮರ ಸಾರಿದ್ದರು. ಇದೀಗ ಪ್ರತಾಪ್​ ಸಿಂಹರನ್ನು ಪಕ್ಷದ ಸಂಘಟನೆ ಗಳಲ್ಲಿ ಯಾವುದೇ ಸ್ಥಾನ ನೀಡದೇ ವಿಜಯೇಂದ್ರ ಶಾಕ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES